ಕಡಬ: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಕಚೇರಿಯ ದೀನದಯಾಳು ರೈತ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಹಾಸಭೆಯ ತಿಳುವಳಿಕೆ ಪತ್ರವನ್ನು ಓದಿ ದಾಖಲು ಮಾಡುವುದು, 2023-24 ನೇ ಸಾಲಿನ ಮಹಾಸಭೆಯ ನಡವಳಿಕೆಯನ್ನು ಓದಿ ದಾಖಲಿಸುವುದು, 2024-25 ನೇ ಸಾಲಿನ ವರದಿ ಮಂಡನೆ, 2024-25 ನೇ ಸಾಲಿನ ಆಡಿಟ್ ವರದಿ ಅಂಗೀಕಾರ ಮತ್ತು ಆಡಿಟ್ ನ್ಯೂನತೆಗಳಿಗೆ ಆಡಳಿತ ಮಂಡಳಿ ತಯಾರಿಸಿದ ಸಮಜಾಯಿಷಿಕೆ ವರದಿ ಅಂಗೀಕರಿಸುವ ಕುರಿತು ಚರ್ಚೆ ನಡೆಸಲಾಯಿತು.

