ಶಿವನ ಒಂದು ದೇವಾಲಯಕ್ಕಾಗಿ ಥಾಯ್ಲೆಂಡ್‌-ಕಾಂಬೋಡಿಯ ಮಧ್ಯೆ ಯುದ್ಧ

ಗಡಿಯಲ್ಲಿರುವ ಪುರಾತನ ದೇಗುಲ ಯಾರಿಗೆ ಸೇರಿದ್ದು ಎನ್ನುವುದೇ ವಿವಾದ

ಬ್ಯಾಂಕಾಕ್‌: ಒಂದೆಡೆ ರಷ್ಯಾ ಮತ್ತು ಉಕ್ರೇನ್‌ ವರ್ಷಾನುಗಟ್ಟಲೆ ಕಾದಾಡುತ್ತಿವೆ, ಇನ್ನೊಂದೆಡೆ ಇಸ್ರೇಲ್‌ ತನ್ನ ಶತ್ರು ದೇಶಗಳ ಮೇಲೆಲ್ಲ ದಾಳಿ ಮಾಡುತ್ತಿದೆ. ಇದರ ನಡುವೆ ಇಷ್ಟರತನಕ ತಣ್ಣಗೆ ತಮ್ಮ ಪಾಡಿಗೆ ತಾವಿದ್ದ ಥಾಯ್ಲೆಂಡ್ ಮತ್ತು ಕಾಂಬೋಡಿಯ ಮಧ್ಯೆ ಯುದ್ಧ ಶುರುವಾಗಿದೆ. ಎರಡೂ ದೇಶಗಳು ಕ್ಷಿಪಣಿ, ಡ್ರೋನ್‌ ಹಾರಿಸಿಕೊಂಡಿವೆ. ಈಗಾಗಲೇ 13 ಮಂದಿ ಈ ಯುದ್ಧಕ್ಕೆ ಬಲಿಯಾಗಿದ್ದಾರೆ. ಈ ಎರಡು ದೇಶಗಳ ನಡುವೆ ಯುದ್ಧ ನಡೆಯುತ್ತಿರುವುದು ಒಂದು ಪುರಾತನ ಶಿವ ದೇವಸ್ಥಾನಕ್ಕಾಗಿ ಎನ್ನುವುದು ವಿಶೇಷ.

ಥಾಯ್ಲೆಂಡ್‌-ಕಾಂಬೋಡಿಯ ಗಡಿಯಲ್ಲಿ ತೀವ್ರ ಸಂಘರ್ಷ ನಡೆಯುತ್ತಿದ್ದು, ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ.
ಬುಧವಾರ ದಟ್ಟವಾದ ಅರಣ್ಯದಿಂದ ಕೂಡಿದ ಡ್ಯಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ ಕಾಂಬೋಡಿಯದ ಡ್ರೋನ್ ಪತ್ತೆಯಾಗಿದೆ ಎಂದು ಥಾಯ್ಲೆಂಡ್‌ ಹೇಳಿತ್ತು. ಇದಾದ ಸ್ವಲ್ಪ ಸಮಯದ ನಂತರ, ನೆಲಬಾಂಬ್ ಸ್ಫೋಟಗೊಂಡು ಐವರು ಥಾಯ್ಲೆಂಡ್‌ ಸೈನಿಕರು ಗಾಯಗೊಂಡಿದ್ದು ಈ ಯುದ್ಧಕ್ಕೆ ಮೂಲ ಕಾರಣ. ಈ ನೆಲ ಬಾಂಬನ್ನು ಕಾಂಬೋಡಿಯ ಇಟ್ಟಿತ್ತು ಎಂದು ಥಾಯ್ಲೆಂಡ್‌ ದೂರಿದೆ.





















































 
 

ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಬೆನ್ನಲ್ಲೇ ಎರಡೂ ದೇಶಗಳು ರಾಯಭಾರಿಗಳನ್ನು ಹೊರ ಹಾಕಿವೆ. ನಂತರ ಥಾಯ್ಲೆಂಡ್‌ ಕಾಂಬೋಡಿಯದ ಮೇಲೆ ಡ್ರೋನ್‌ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಬೋಡಿಯದ ಫಿರಂಗಿ ಗುಂಡಿನ ದಾಳಿ ನಡೆಸಿದೆ. ಎರಡು ದೇಶಗಳು ಗಡಿಯನ್ನು ಮುಚ್ಚಿದ್ದು ತನ್ನ ದೇಶದ ಜನರು ಮರಳುವಂತೆ ಸೂಚಿಸಿವೆ. ಎರಡೂ ದೇಶಗಳ 800 ಕಿಮೀ ಗಡಿಯಲ್ಲಿ ಕನಿಷ್ಠ ಆರು ಸ್ಥಳಗಳಲ್ಲಿ ಘರ್ಷಣೆಗಳು ನಡೆದಿವೆ.

ಏನಿದು ದೇವಸ್ಥಾನ ವಿವಾದ?

ಖಮೇರ್ ರಾಜವಂಶದ ಒಂದನೇ ಸೂರ್ಯವರ್ಮ 11ನೇ ಶತಮಾನದಲ್ಲಿ ಶಿವನ ದೇವಸ್ಥಾನ ಕಟ್ಟಿಸಿದ್ದಾನೆ. ಈ ದೇವಸ್ಥಾನ ಎರಡೂ ದೇಶಗಳ ಗಡಿಯಲ್ಲಿದೆ. ಈ ದೇವಸ್ಥಾನ ಯಾವ ದೇಶಕ್ಕೆ ಸೇರಬೇಕು ಎನ್ನುವ ವಿಚಾರಕ್ಕೆ ಈಗ ಕಿತ್ತಾಟ ನಡೆಯುತ್ತಿದೆ. ವಿಶೇಷ ಏನೆಂದರೆ ಈ ಥಾಯ್ಲೆಂಡ್‌ ಮತ್ತು ಕಾಂಬೋಡಿಯ ಬೌದ್ಧ ಧರ್ಮದ ದೇಶಗಳಾಗಿದ್ದು, ಶೇ.95ಕ್ಕೂ ಹೆಚ್ಚು ಬೌದ್ಧರೇ ನೆಲೆಸಿದ್ದಾರೆ.

ಈ ದೇವಾಲಯ ಖಮೇರ್ ಸಾಮ್ರಾಜ್ಯದ ಐತಿಹಾಸಿಕ ಗಡಿಯೊಳಗೆ ಬರುತ್ತವೆ ಎಂದು ಕಾಂಬೋಡಿಯ ಹೇಳಿದರೆ ಥಾಯ್ಲೆಂಡ್‌ ವಸಾಹತುಶಾಹಿ ಯುಗದ ನಕ್ಷೆಗಳನ್ನು ತೋರಿಸಿ ದೇವಾಲಯ ತನ್ನ ಪ್ರದೇಶದೊಳಗೆ ಇದೆ ಎಂದು ಪ್ರತಿಪಾದಿಸುತ್ತಿದೆ. ಈ ದೇವಸ್ಥಾನವನ್ನು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಬೇಕು ಎಂದು ಕಾಂಬೋಡಿಯ ಭಾರಿ ಪ್ರಯತ್ನ ನಡೆಸಿತ್ತು. ಆದರೆ ಇದಕ್ಕೆ ಥಾಯ್ಲೆಂಡ್ ಆಕ್ಷೇಪ ವ್ಯಕ್ತಪಡಿಸಿತ್ತು.

ಮೂಲತಃ ಶೈವ ಹಿಂದೂ ಪದ್ಧಗತಿಯ ಪೂಜೆಗಾಗಿ ನಿರ್ಮಿಸಲ್ಪಟ್ಟಿದ್ದರೂ, ಖಮೇರ್ ಸಾಮ್ರಾಜ್ಯ ಮಹಾಯಾನ ಬೌದ್ಧ ಧರ್ಮವನ್ನು ಸ್ವೀಕರಿಸಿದ ಬಳಿಕ ದೇವಾಲಯಗಳನ್ನು ಕ್ರಮೇಣ ಬೌದ್ಧ ಬಳಕೆಗೆ ಬಳಸಲಾಯಿತು. ರಾಜ ಜಯವರ್ಮನ್ VIIರ ಅಡಿಯಲ್ಲಿ, ಧರ್ಮ ಸಲಾಸ್ (ವಿಶ್ರಾಂತಿ ಗೃಹಗಳು) ನಂತಹ ಹೆಚ್ಚುವರಿ ರಚನೆಗಳನ್ನು ಸೇರಿಸಲಾಯಿತು.

error: Content is protected !!
Scroll to Top