ಕಡಬ: ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ (52) ಎಂಬುವರು ಜುಲೈ 22ರಂದು ನಾಪತ್ತೆಯಾಗಿದ್ದು, ಶುಕ್ರವಾರ ಅವರ ಮೃತ ದೇಹ ಕುಮಾರಧಾರ ನದಿಯಲ್ಲಿ ಪತ್ತೆಯಾಗಿದೆ.
ಈಶ್ವರ್ ಮಲ್ಪೆ ಹಾಗೂ ತಂಡದವರ ಮೂರು ದಿನದ ಕಾರ್ಯಾಚರಣೆಯ ಬಳಿಕ ಶವವನ್ನು ಮೇಲೆತ್ತಿದ್ದಾರೆ. ಈಶ್ವರ್ ಮಲ್ಪೆ ಜೊತೆಗೆ ಸುಳ್ಯದ ಪ್ರಗತಿ ಆ್ಯಂಬುಲೆನ್ಸ್ ಚಾಲಕ ಅಚ್ಚು ಪ್ರಗತಿ ಸೇರಿದಂತೆ ಸುಳ್ಯ ತಾಲೂಕು ಆ್ಯಂಬುಲೆನ್ಸ್ ಚಾಲಕ- ಮಾಲಕರು ಪಾಲ್ಗೊಂಡಿದ್ದರು.
























