ಸುಳ್ಯ: ಆಗಸ್ಟ್ 25 ರಂದು ಗೋವಾದಲ್ಲಿ ನಡೆಯಲಿರುವ ಕನಕ ಉಪನ್ಯಾಸ ಉತ್ಸವದಲ್ಲಿ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕದಿಂದ ಡಾ. ಅನುರಾಧ ಕುರುಂಜಿ ಅವರು ಆಯ್ಕೆಯಾಗಿದ್ದಾರೆ.
ಇವರು ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರಾಗಿದ್ದಾರೆ. ಇವರು 250 ಕ್ಕೂ ಅಧಿಕ ತರಬೇತಿ ಉಪನ್ಯಾಸಗಳನ್ನು ನೀಡಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿಯೂ ಪ್ರಬಂಧ ಮಂಡನೆ ಮಾಡಿದ್ದಾರೆ.
ಇವರು ಪದ್ಮಯ ಗೌಡ ಕುರುಂಜಿ ಮತ್ತು ಸೀತಮ್ಮ ಕುರುಂಜಿ ದಂಪತಿಯ ಪುತ್ರಿ. KVG ಪಾಲಿಟೆಕ್ನಿಕ್ ಚಂದ್ರಶೇಖರ ಬಿಳಿನೆಲೆ ಅವರ ಪತ್ನಿ.
























