ಮಂಗಳೂರು ಸೆಂಟ್ರಲ್‌ – ಶ್ರೀ ಮಾತಾ ವೈಷ್ಣೋದೇವಿ ಕತ್ರಾಗೆ ನೇರ ರೈಲು ಸೇವೆ: ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ಕರಾವಳಿ ಕರ್ನಾಟಕ ಪ್ರದೇಶದ ದೀರ್ಘಕಾಲದ ಬೇಡಿಕೆಯಾದ ಮಂಗಳೂರು ಸೆಂಟ್ರಲ್ (MAQ) ನಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ (SVDK) ಗೆ ನೇರ ಮತ್ತು ಸಮಯ ದಕ್ಷ ರೈಲು ಸೇವೆಯನ್ನು ಒದಗಿಸಲು ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಮನವಿ ಮಾಡಿದ್ದಾರೆ.

ಕೆಲ ವಾರಗಳ ಹಿಂದೆ ಹಲವರು ನವಯುಗ ಎಕ್ಸ್‌ಪ್ರೆಸ್ ಪುನರಾರಂಭ ಮಾಡಿ, ಇದನ್ನು ಹಾಸನ, ಹುಬ್ಬಳ್ಳಿ – ಮೀರಜ್ ಮಾರ್ಗವಾಗಿ ದೆಹಲಿಗೆ ಸಂಪರ್ಕಿಸುವಂತೆ ಕೋರಿ ಸಾರ್ವಜನಿಕ ವಲಯದಿಂದ ಪತ್ರ, ಇಮೇಲ್ ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಹಲವರು ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿದ್ದು, ಅವರು ವಿವಿಧ ರೈಲ್ವೆ ಝೋನ್‌ಗಳಿಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾಗಿಯೂ ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಪ್ರಯಾಣಿಕರ ಅನುಕೂಲತೆ ದೃಷ್ಟಿಯಿಂದ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಿಶೋರ್ ಕುಮಾರ್ ಪುತ್ತೂರು ಅವರ ಈ ಪ್ರಯತ್ನ ಶ್ಲಾಘನೀಯ.





















































 
 

error: Content is protected !!
Scroll to Top