ಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿರುವ ಧರ್ಮಸ್ಥಳದಲ್ಲಿ ನಡೆದ ನೂರಾರು ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ SIT ಅಧಿಕಾರಿಗಳ ತಂಡಕ್ಕೆ ಬೆಳ್ತಂಗಡಿಯಲ್ಲಿ ಕಚೇರಿ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ.
ಅಸಹಜವಾಗಿ ಮೃತಪಟ್ಟವರ ಹೆಣಗಳನ್ನು ಹೂಳಲಾಗಿದೆ ಎಂಬ ಬಹುದೊಡ್ಡ ಆರೋಪದಲ್ಲಿ ದಾಖಲಾದ ಪ್ರಕರಣ ಇದಾಗಿದೆ. ಈ ಪ್ರಕರಣದ ತನಿಖೆ ನಡೆಸಲಿರುವ SIT ಅಧಿಕಾರಿಗಳು ಇಂದು ಧರ್ಮಸ್ಥಳಕ್ಕೆ ತೆರಳುತ್ತಿದೆ ಎಂದು ಹೇಳಲಾಗಿದೆ. SIT ಅಧಿಕಾರಿಗಳಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪದಲ್ಲಿರುವ ನೂತನವಾಗಿ ನಿರ್ಮಾಣವಾದ ಪೊಲೀಸ್ ಕ್ವಾಟ್ರಸ್ನಲ್ಲಿ ಕಚೇರಿ ಆರಂಭವಾಗಲಿದೆ ಎಂದು ವರದಿಗಳು ಹೇಳಿವೆ.
ಜೊತೆಗೆ ಮಂಗಳೂರಿನ SP ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಗೆ SIT ಕಚೇರಿ ಸಿದ್ಧವಾಗುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.
























