ಬಡ ವ್ಯಾಪಾರಿಗಳಿಂದ ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ: ಸಂಸದ ಯದುವೀರ್

ಬೆಂಗಳೂರು: ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೊಳಿಸಿದ ಕಾರಣ ಕರ್ನಾಟಕ ದಿವಾಳಿಯಾಗಿದೆ. ಈಗ ಸಣ್ಣ ವ್ಯಾಪಾರಿಗಳ ಮೇಲೆ ತೆರಿಗೆ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದ್ದಾರೆ.

ರಾಜ್ಯದ ಬಡ ವ್ಯಾಪಾರಿಗಳ ಮೇಲೆ ಜಿಎಸ್‌ಟಿ ‌ತೆರಿಗೆ ನೊಟೀಸು ಜಾರಿಗೆೊಳಿಸಿ ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಕಾಂಗ್ರೆಸ್ ಪಕ್ಷದಿಂದಾಗುತ್ತಿದೆ‌. ವ್ಯಾಪಾರಿಗಳಿಗೆ ಜಿಎಸ್‌ಟಿ ತೆರಿಗೆ ನೊಟೀಸ್ ವಿಧಿಸಿರುವ ಕ್ರಮ ಕೇಂದ್ರ ಸರ್ಕಾರದ್ದಲ್ಲ.‌ ಸಣ್ಣ ವ್ಯಾಪಾರಿಗಳನ್ನು ‌ಜಿಎಸ್‌ಟಿ ವ್ಯಾಪ್ತಿಗೆ ತರುವ ಮೂಲಕ ಒಂದೇ ಬಾರಿ ಲಕ್ಷಾಂತರ ರೂ. ಲೂಟುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದಾಗಿದೆ. ಇಂತಹ ನಿಲುವು ತೆಗೆದುಕೊಂಡು ಸಣ್ಣ ವ್ಯಾಪಾರಿಗಳಲ್ಲಿ ಆತಂಕ ಹುಟ್ಟಿಸಿದ ವಾಣಿಜ್ಯ ಇಲಾಖೆಯ ನಡೆ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಬೊಕ್ಕಸ ಬಿಟ್ಟಿ ಗ್ಯಾರಂಟಿ ಯೋಜನೆಗಳಿಂದ ಬರಿದಾಗಿದೆ. ಅದನ್ನು ಸರಿಪಡಿಸಲು ಸಣ್ಣ ವ್ಯಾಪಾರಿಗಳಿಂದ ಸರ್ಕಾರ ಹಗಲು ದರೋಡೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.





















































 
 

error: Content is protected !!
Scroll to Top