ಆಪರೇಷನ್ ಸಿಂಧೂರ್: ಲೋಕಸಭೆಯಲ್ಲಿ 16 ಗಂಟೆಗಳ ಚರ್ಚೆಗೆ ಸಮಯ ನಿಗದಿ?

ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಸಂಸತ್ ಅಧಿವೇಶನದಲ್ಲಿ 16 ಗಂಟೆಗಳ ಕಾಲ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.

ಜುಲೈ 28 ರಂದು ಲೋಕಸಭೆ ಮತ್ತು ಜುಲೈ 29 ರಂದು ರಾಜ್ಯಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭೆಯ ಸಂಸದೀಯ ಸಲಹಾ ಸಮಿತಿ ಸಭೆ ನಡೆದಿದ್ದು ಮೇಲ್ಮನೆಯಲ್ಲಿ ಜುಲೈ 29 ರಂದು ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಲೋಕಸಭೆಯಲ್ಲಿ 16 ಗಂಟೆಗಳ ಕಾಲ ಈ‌ ವಿಷಯಕ್ಕೆ ಸಂಬಂಧಿಸಿದ ಹಾಗೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಚರ್ಚೆಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಬೇಕು ಎಂದು ವಿಪಕ್ಷಗಳು ಬೇಡಿಕೆ ಇಟ್ಚಿದ್ದು, ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಭಾರತಕ್ಕೆ ಹಿಂದಿರುಗಿದ ಮೇಲೆ ಮುಂದಿನ ವಾರ ಚರ್ಚೆಗೆ ದಿನ ನಿಗದಿ ಮಾಡಲಾಗಿರುವುದಾಗಿ ಹೇಳಲಾಗಿದೆ.





















































 
 

error: Content is protected !!
Scroll to Top