ತಿರುವನಂತಪುರಂ: ಶಶಿ ತರೂರ್ ಅವರನ್ನು ಕೇರಳ ರಾಜ್ಯದ ರಾಜಧಾನಿಯಲ್ಲಿ ನಡೆಯುವ ಯಾವ ಕಾರ್ಯಕ್ರಮಗಳಿಗೂ ಆಹ್ವಾನಿಸುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿರುವ ತರೂರ್ ಅವರನ್ನು ಯಾವುದೇ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಆಹ್ವಾನಿಸುವುದಿಲ್ಲ ಎಂದು ಕೇರಳ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಹೇಳಿಕೆಗೆ ತರೂರ್ ತಿರುಗೇಟು ನೀಡಿದ್ದಾರೆ.
ಈ ರೀತಿಯ ಹೇಳಿಕೆಯನ್ನು ನೀಡಿದವರು ಯಾರು ಮತ್ತು ಅವರಿಗೆ ಪಕ್ಷದಲ್ಲಿ ಯಾವ ಸ್ಥಾನಮಾನ ಇದೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಈ ರೀತಿ ಮಾತನಾಡಲು ಅವರು ಆಧಾರ ಹೊಂದಿರಬೇಕು. ಇದನ್ನು ಹೇಳುವ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವೇನು? ಎಂಬುದನ್ನು ತಿಳಿಯಬಯಸುವುದಾಗಿ ಹೇಳಿದ್ದಾರೆ.
ಮೊದಲು ದೇಶ ಮುಖ್ಯ. ಪಕ್ಷಗಳು ದೇಶವನ್ನು ಉತ್ತಮಗೊಳಿಸುವ ಸಾಧನಗಳಾಗಬೇಕು ಎನ್ನುವ ತರೂರ್ ಮಾತಿಗೆ ಕೆ. ಮುರಳೀಧರನ್ ಪ್ರತಿಕ್ರಿಯೆ ನೀಡಿದ್ದರು.
























