ಪುತ್ತೂರು: ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆ, ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸುಳ್ಯ ಕೆವಿಜಿ ಆಯುರ್ವೇದಿಕ್ ಕಾಲೇಜ್ ಮತ್ತು ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಬೃಹತ್ ವೈದ್ಯಕೀಯ ಶಿಬಿರ ಜು.27 ಭಾನುವಾರ ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ನಡೆಯಲಿದೆ.
ಬೆಳಿಗ್ಗೆ 9 ರಿಂದ ಮಧ್ಯಾಹ್ನದ ವರೆಗೆ ನಡೆಯುವ ಶಿಬಿರದಲ್ಲಿ ಜನರಲ್ ಮೆಡಿಸಿನ್, ಶಸ್ತ್ರಚಿಕಿತ್ಸೆ ವಿಭಾಗ, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ, ಎಲುಬು ಮತ್ತು ಕೀಲುರೋಗ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ, ಮಕ್ಕಳ ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಚರ್ಮ ಮತ್ತು ಲೈಂಗಿಕ ರೋಗ ವಿಭಾಗ, ಮನೋರೋಗ ವಿಭಾಗ, , ಶ್ವಾಸಕೋಶ ವಿಭಾಗ, ಆಯುರ್ವೇದ ಚಿಕಿತ್ಸಾ ವಿಭಾಗ ಲಭ್ಯವಿದೆ. ಅಲ್ಲದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಲಾಗುವುದು. ತಾಸಣೆಗೆ ಬರುವವರು ತಮ್ಮ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ತರಬೇಕು. ಶಿಬಿರದಲ್ಲಿ ಇಸಿಜಿ, ಬಿಪಿ, ಶುಗರ್ ಉಚಿತ ತಪಾಸಣೆ ಲಭ್ಯವಿದೆ.
ಬನ್ನೂರು ಗ್ರಾಮ ಪಂಚಾಯತ್, ಚಿಕ್ಕಮುಡ್ನೂರು ಹಾಲುತ್ಪಾದಕರ ಸಹಕಾರಿ ಸಂಘ, ಕೆಮ್ಮಾಯಿ ವಿಷ್ಣು ಯುವಕ ಮಂಡಲ, ಬನ್ನೂರು ಸ್ಪೂರ್ತಿ ಯುವಕ ಮಂಡಲ, ಕೃಷ್ಣನಗರ ಸತ್ಯನಾರಾಯಣ ಸೇವಾ ಸಮಿತಿ, ಆನೆಮಜಲು ಫ್ರೆಂಡ್ಸ್ ಸೇವಾ ಸಮಿತಿ, ಪುತ್ತೂರು ಎವಿಜಿ ಅಸೋಸಿಯೇಟ್ಸ್ ಹಾಗೂ ಬನ್ನೂರು ನಮ್ಮ ಕ್ಲಿನಿಕ್ ಸಂಸ್ಥೆಗಳು ಶಿಬಿರಕ್ಕೆ ಸಹಕಾರ ನೀಡಲಿವೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448485983, 7338085983 ಸಂಪರ್ಕಿಸಬಹುದು.
























