ವಿಟ್ಲ: ಬಂಟ್ವಾಳ ತಾಲೂಕಿನ ಶಾಂತಿನಗರದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಘಟಕಾಧ್ಯಕ್ಷೆ ಶ್ರೀಮತಿ ಅಮಿತಾಕೃಷ್ಣ ಕುಡಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜುಲೈ 20ರಂದು ಅಕ್ಷಯ ಸಭಾಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಸಂಘದ ಎಲ್ಲಾ ವಿಭಾಗಗಳು ಸಂಯುಕ್ತವಾಗಿ ಇದನ್ನು ಆಯೋಜಿಸಿದ್ದವು.

ವಿಶಿಷ್ಟ ಶೈಲಿಯ ಉದ್ಘಾಟನೆ
ಪುತ್ತೂರಿನ ಗೌಡ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆಯವರು ಲೋಟಕ್ಕೆ ನಾಣ್ಯ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದೀಪ ಪ್ರಜ್ವಲಿಸಿದ ಬಹುಮುಖ ಪ್ರತಿಭೆಯ ಉದ್ಯಮಿ, ತರಬೇತುಗಾರ್ತಿ ಲತಾ ಪ್ರಸಾದ್ ಕುಧ್ಪಾಜೆ
ಸಭಾ ಕಾರ್ಯಕ್ರಮಕ್ಕೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಶ್ರೀಮತಿ ಲತಾ ಪ್ರಸಾದ್ ಕುಧ್ಪಾಜೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ವಿಶೇಷ ಉಪನ್ಯಾಸ
ಕಾರ್ಯಕ್ರಮದಲ್ಲಿ ಪುತ್ತೂರಿನ ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ಇದರ ಆಡಳಿತಾಧಿಕಾರಿ, ನಿವೃತ್ತ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಆಟಿಡೊಂಜಿ ದಿನ ಪ್ರಧಾನ ಉಪನ್ಯಾಸ ನೀಡಿದರು. ಆಟಿ ಆಚರಣೆಯ ಮಹತ್ವವನ್ನು ತಿಳಿಸಿದ ಅವರು ಸಂಸ್ಕೃತಿಯ ಮತ್ತು ಆಚರಣೆಗಳ ಮಹತ್ವವನ್ನು ತಿಳಿಸಿ ಅವುಗಳು ಸಂರಕ್ಷಿಸಿ ಮುಂದುವರಿಸಿಕೊಂಡು ಹೋಗುವ ಅವಶ್ಯಕತೆಯನ್ನು ಒತ್ತಿ ಹೇಳಿದರು.
ಮುದ ನೀಡಿದ ವಿವಿಧ ಸ್ಪರ್ಧೆಗಳು
ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.
29 ಬಗೆಯ ತಿನಿಸುಗಳು: ಸಂಘಟನೆಗೆ ಸಾಕ್ಷಿ
ಸಮಾರಂಭದ ಆಕರ್ಷಣೆಯಾಗಿ ಎಲ್ಲರಿಗೂ 29 ಬಗೆಯ ವಿವಿಧ ಆಟಿ ತಿಂಗಳ ವಿಶೇಷ ತಿಂಡಿ-ತಿನಿಸುಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಸಮಾಜ ಬಾಂಧವರು ಅವರವರ ಮನೆಗಳಲ್ಲಿಯೇ ತಯಾರಿಸಿ ತಂದದ್ದು ಸಂಘಟನೆಗೆ ಸಾಕ್ಷಿ ನುಡಿಯುತ್ತಿತ್ತು.
ಸಂಘದ ಅಧ್ಯಕ್ಷ ಸಿ. ಕೆ. ಗೌಡ ಇರಂದೂರು, ಗೌರವಾಧ್ಯಕ್ಷ ಗಿರಿಯಪ್ಪ ಗೌಡ ಶಾಂತಿಲ, ಯುವ ವೇದಿಕೆ ಅಧ್ಯಕ್ಷ ದಿನೇಶ್ ಗೌಡ ಮಾಡ್ತಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ಲುಪಾಡಿಯ ಧರ್ಮಾವತಿ ಬೆಳ್ಯಪ್ಪ ಗೌಡ ದೇವರಮನೆ ಸ್ವಾಗತಿಸಿ, ಕಾರ್ಯದರ್ಶಿ ವೇದಾವತಿ ವಂದಿಸಿದರು. ಜಯಂತಿ ಮತ್ತು ಮಲ್ಲಿಕಾ ನಿರೂಪಣೆಗೈದರು.
























