ಮೈಸೂರು: ಸರ್ಕಾರದ ಸಾಧನೆಗೆ ಸಂಬಂಧಿಸಿದ ಹಾಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ. ಆದರೆ ಸರ್ಕಾರದ ಸಾಧನೆಯ ಬಗ್ಗೆ ಸುಳ್ಳು ಹೇಳುವ ಬಿಜೆಪಿಗರು ಎಂದಿಗೂ ಬಹಿರಂಗ ಚರ್ಚೆಗೆ ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ಸಾಧನೆಗೆ ಸಂಬಂಧಿಸಿದ ಹಾಗೆ ಬಹಿರಂಗ ಚರ್ಚೆಗೆ ನಾನು ಹಲವು ಬಾರಿ ಬಿಜೆಪಿಗರನ್ನು ಆಹ್ವಾನಿಸಿದ್ದೇನೆ. ಆದರೆ ಅವರು ಚರ್ಚೆಗೆ ಬಂದಿಲ್ಲ. ಸುಳ್ಳು ಮಾತನಾಡುವವರು ಚರ್ಚೆ ಮಾಡಲು ಬರುವುದಿಲ್ಲ. ಅವರು ಚರ್ಚೆಗೆ ಬಂದರೆ ನಾವು ಚರ್ಚೆ ಮಾಡಲು ಸಿದ್ಧ ಎಂದು ಅವರು ಟಾಂಗ್ ನೀಡಿದ್ದಾರೆ.
ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ವಿಜಯನಗರದಲ್ಲಿ ನಡೆಸಿದ ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನರು ಭಾಗವಹಿಸಿದ್ದರು. ಇದು ಜನರು ನಮಗೆ ನೀಡುತ್ತಿರುವ ಬೆಂಬಲ. ಸುಮಾರು 52 ಸಾವಿರ ಕೋಟಿ ರೂ. ಗಳನ್ನು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿದೆ ಎಂದು ಅವರು ನುಡಿದಿದ್ದಾರೆ.
























