ಹಮಾಸ್‌ನನ್ನು ಇನ್ನೋರ್ವ ಕಮಾಂಡರ್‌ನನ್ನು ಸಾಯಿಸಿದ ಇಸ್ರೇಲ್‌

ಉಗ್ರರ 75ಕ್ಕೂ ಹೆಚ್ಚು ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ

ಟೆಲ್ ಅವಿವ್ : ಹಮಾಸ್‌ನ ಇನ್ನೋರ್ವ ಉನ್ನತ ಕಮಾಂಡರ್ ಬಾಶರ್ ಥಾಬೆಟ್​​ನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ರಕ್ಷಣಾ ಪಡೆ ಹೇಳಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಭಯೋತ್ಪಾದಕರ 75 ಅಡಗುತಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಐಡಿಎಫ್​ ಹೇಳಿದೆ.

ಭಯೋತ್ಪಾದಕ ಮೂಲಸೌಕರ್ಯ, ಭಯೋತ್ಪಾದಕರು ಮತ್ತು ಸುರಂಗಗಳನ್ನು ಪತ್ತೆಹಚ್ಚಿ ನಾಶಪಡಿಸಲಾಗಿದೆ ಎಂದು ಐಡಿಎಫ್ ಹೇಳಿದೆ. ಬಶರ್ ಥಾಬೆಟ್ ಹಮಾಸ್‌ನ ಶಸ್ತ್ರಾಸ್ತ್ರ ಉತ್ಪಾದನಾ ಪ್ರಧಾನ ಕಚೇರಿಯಲ್ಲಿ ಅಭಿವೃದ್ಧಿ ಮತ್ತು ಯೋಜನೆಗಳ ವಿಭಾಗದ ಕಮಾಂಡರ್ ಆಗಿದ್ದ. ಹಮಾಸ್‌ಗೆ ಶಸ್ತ್ರಾಸ್ತ್ರ ಪೂರೈಕೆಯ ಉಸ್ತುವಾರಿ ಇವನ ಮೇಲಿತ್ತು ಎಂದು ಇಸ್ರೇಲ್‌ ಹೇಳಿಕೊಂಡಿದೆ.





















































 
 

ಕದನ ವಿರಾಮ ಇದ್ದರೂ ಹಮಾಸ್‌ ಮೇಲಿನ ವೈಮಾನಿಕ ಕಾರ್ಯಾಚರಣೆಯನ್ನು ಮುಂದುವರಿಸಿರುವ ಇಸ್ರೇಲ್‌ ನಿನ್ನೆ ಬಾಶರ್‌ ಥಾಬೆಟ್‌ನನ್ನು ಸಾಯಿಸುವ ಮೂಲಕ ಹಮಾಸ್‌ಗೆ ಇನ್ನೊಂದು ಬಲವಾದ ಹೊಡೆತ ನೀಡಿದೆ.

ಇಸ್ರೇಲ್‌ ಸೇನೆ ನಿನ್ನೆಯ ದಾಳಿಯಲ್ಲಿ ಕನಿಷ್ಠ 115 ಪ್ಯಾಲೆಸ್ತೀನಿಯನ್ನರನ್ನು ಕೊಂದಿದೆ. ಕಳೆದ 24 ಗಂಟೆಗಳ ವರದಿ ಅವಧಿಯಲ್ಲಿ 18 ಜನರು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್‌ ವಾಯುಪಡೆ (ಐಎಎಫ್) ಗಾಜಾದಲ್ಲಿ ಮಿಲಿಟರಿ ಕಾಂಪೌಂಡ್‌ಗಳು ಮತ್ತು ಸೆಲ್ ಸೈಟ್‌ಗಳು ಸೇರಿದಂತೆ ಸುಮಾರು 75 ಗುರಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಐಡಿಎಫ್ ತಿಳಿಸಿದೆ. ಗಾಜಾದಲ್ಲಿ ಇಸ್ರೇಲ್‌ನ ಕ್ರಮಗಳನ್ನು ಖಂಡಿಸಿ, ಟುನೀಶಿಯಾ, ಇರಾಕ್, ಟರ್ಕಿ, ಲೆಬನಾನ್ ಮತ್ತು ಮೊರಾಕ್ಕೊ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

error: Content is protected !!
Scroll to Top