ಸಿದ್ದರಾಮಯ್ಯ ಅವರದ್ದು ಹೋರಾಟದ ಹಿನ್ನೆಲೆ ಅಲ್ಲ : ಬಿ.ವೈ. ವಿಜಯೇಂದ್ರ

ವಿಜಯನಗರ: ಸಿ ಎಂ ಸಿದ್ದರಾಮಯ್ಯ ಅವರು ಅಹಿಂದ ಹೆಸರು ಬಳಸಿಕೊಂಡು ಡಾ. ಜಿ. ಪರಮೇಶ್ವರ್, ಖರ್ಗೆ ಅವರನ್ನು ತುಳಿಯುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ‌ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.

ವಿಜಯನಗರದ ಕಾನಾಮಡುಗು ದಾಸೋಹ ಮಠಕ್ಕೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು‌.

ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಾಧನಾ ಸಮಾವೇಶ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಮಾಡಿದ ಕಾರ್ಯಕ್ರಮ. ಈ ಸಮಾವೇಶದ ಮೂಲಕ ಹೈಕಮಾಂಡ್ ಅನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ‌.





















































 
 

ಹಾಗೆಯೇ ಸಿದ್ದರಾಮಯ್ಯ ಅವರದ್ದು ಹೋರಾಟದ ಹಿನ್ನೆಲೆ ಅಲ್ಲ. ಅವರು ಲಾಟರಿ ಹೊಡೆದು ಸಿ ಎಂ ಆದವರು‌ ಎಂದು ಸ್ವಪಕ್ಷದವರೇ ಹೇಳುತ್ತಾರೆ. ರಾಜ್ಯದ ಅಭವೃದ್ಧಿ ಆಗಿಲ್ಲ ಎಂದು ಅವರು ಹೇಳಿದರು‌.

error: Content is protected !!
Scroll to Top