ಲಕ್ನೋ: ಸೋಷಿಯಲ್ ಮೀಡಿಯಾಗಳನ್ನು ಬಳಸಿ ಕೆಲವು ಜನರು ಕನ್ವರ್ ಯಾತ್ರೆಗೆ ಅಪಖ್ಯಾತಿ ತರಲು ಯತ್ನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ ಕಿಡಿ ಕಾರಿದ್ದಾರೆ.
ಎಲ್ಲಿ ಉತ್ಸಾಹ, ನಂಬಿಕೆ, ಭಕ್ತಿ ಇರುತ್ತದೆಯೋ ಅಲ್ಲಿ ಅದನ್ನು ಭಂಗಗೊಳಿಸಲು, ಕೆಣಕಲು ಕೆಲವು ಅಂಶಗಳು ಪ್ರಯತ್ನ ನಡೆಸುತ್ತಲೇ ಇರುತ್ತದೆ. ಹಾಗೆಯೇ ಪ್ರತಿಯೊಂದು ಕನ್ವರ್ ಸಂಘವೂ ಇಂತಹ ದುಷ್ಕೃತ್ಯಗಳನ್ನು ಬಯಲು ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.
ಕೆಲವು ದುಷ್ಟರು ಕನ್ವರ್ ಯಾತ್ರೆಗೆ ತೆರಳುವ ಗುಂಪುಗಳ ಜೊತೆಗೆ ಸೇರಿ ಆ ಯಾತ್ರೆಗೆ ಅಪಖ್ಯಾತಿ ತರಲು ಪ್ರಯತ್ನ ಮಾಡುತ್ತಾರೆ. ಅವರ ಮುಖವಾಡ ಕಳಚಬೇಕು. ಅವರನ್ನು ಯಾತ್ರಿಗಳ ಗುಂಪಿಗೆ ನುಸುಳದ ಹಾಗೆ ಎಚ್ಚರಿಕೆ ವಹಿಸಬೇಕು. ಅಂತಹ ದುಷ್ಟರ ವಿರುದ್ಧ ಕ್ರಮ ಕೈಕೊಳ್ಳಲು ನಮ್ಮ ಸರ್ಕಾರ ಇರುವುದಾಗಿ ಭರವಸೆ ನೀಡಿದ್ದಾರೆ.
























