ಭಾರತದ ಸೇನಾ ಬತ್ತಳಿಕೆಗೆ ‘ಶೇರ್’ ಶಕ್ತಿ

ಲಕ್ನೋ: ಭಾರತೀಯ ಸಶಸ್ತ್ರ ಪಡೆಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಕಲಾಶ್ನಿಕೋವ್ ಸರಣಿಯ ಅತ್ಯಾಧುನಿಕ ಆವೃತ್ತಿಯ ನೂತನ ರೈಫಲ್ ಎಕೆ-203 ಸೇರಲಿದೆ.

ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಅಮೇತಿಯಲ್ಲಿರುವ ರೈಫಲ್ ತಯಾರಿಸುವ ಸಂಸ್ಥೆ ಇಂಡೋ – ರಷ್ಯನ್ ಪ್ರೈ.ಲಿ. ಯು ದೇಶೀಯವಾಗಿ ಇದನ್ನು ಸಿದ್ಧಪಡಿಸಿದ್ದು, ಇದಕ್ಕೆ ‘ಶೇರ್’ ಎಂದು ಹೆಸರನ್ನಿರಿಸಲಾಗಿದೆ. ಇದನ್ನು ಸಶಸ್ತ್ರ ಪಡೆಗಳಿಗೆ ಸರಬರಾಜು ಮಾಡಲು ಕಂಪನಿ ಸಿದ್ಧವಾಗಿದೆ.

ಈ ರೈಫಲ್‌ನಲ್ಲಿ ನಿಮಿಷಕ್ಕೆ 700 ಗುಂಡುಗಳನ್ನು ಹಾರಿಸಬಹುದಾಗಿದ್ದು, ಇದಕ್ಕೆ ಗುಂಡುಗಳನ್ನು 800 ಮೀ. ವರೆಗೆ ಕ್ರಮಿಸುವ ಶಕ್ತಿ ಇದೆ. ಈ ಕಂಪನಿಯು 5,200 ಕೋಟಿ ರೂ. ಗಳಿಗೆ ಈ ರೈಫಲ್‌ಗಳ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಸೇನೆಗೆ ಆರು ಲಕ್ಷಕ್ಕೂ ಹೆಚ್ಚು ರೈಫಲ್‌ಗಳನ್ನು ಒದಗಿಸಬೇಕಿದೆ. 2030 ರ ಡಿಸೆಂಬರ್ ಒಳಗಾಗಿ ರೈಫಲ್‌ಗಳು ಸಂಪೂರ್ಣ ಪ್ರಮಾಣದಲ್ಲಿ ಸೇನೆಗೆ ಹಸ್ತಾಂತರವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿವೆ.





















































 
 

error: Content is protected !!
Scroll to Top