ಸವಣೂರು-ಪುಣ್ಚತ್ತಾರು ರಸ್ತೆ ಬದಿ ಗಿಡ ನೆಡುವ ಯೋಜನೆ | ವಿದ್ಯುತ್‍ ತಂತಿ ಹಾದು ಹೋಗುವ ಕೆಳಭಾಗದಲ್ಲೇ ಗಿಡ ನಾಟಿ | ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕೆಂದು ಸ್ಥಳೀಯರ ಆಗ್ರಹ

ಕಾಣಿಯೂರು: ಸುಬ್ರಹ್ಮಣ್ಯ-ಕಾಣಿಯೂರು ರಾಜ್ಯ ಹೆದ್ದಾರಿಯ ಸವಣೂರಿನಿಂದ ಪುಣ್ಯತ್ತಾರುವರೆಗೆ ಅರಣ್ಯ ಇಲಾಖೆಯಿಂದ ರಸ್ತೆ ಬದಿಯಲ್ಲಿ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಗಿಡಗಳನ್ನು ನೆಡಲಾಗಿದೆ. ಆದರೆ ರಸ್ತೆಗೆ ಸಮೀಪ, ವಿದ್ಯುತ್ ತಂತಿ ಹಾದು ಹೋಗುವ ಜಾಗದ ಕೆಳ ಭಾಗದಲ್ಲೇ ಗಿಡಗಳನ್ನು ನೆಡಲಾಗಿದ್ದು, ಅವೈಜ್ಞಾನಿಕವಾಗಿ ಗಿಡನೆಡಲಾಗಿದೆ. ಮುಂದೆ ಗಿಡ ಬೆಳೆದು ಮರವಾದಾಗ ಅಪಾಯ ಸಂಭವ ಗ್ಯಾರಂಟಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜೊತೆಗೆ ಜೆ ಜೆ ಎಂ ಪೈಪು ಲೈನ್ ಅಗೆದ ಆಸುಪಾಸಿನಲ್ಲಿಯೇ ಗಿಡ ನೆಡಲಾಗಿದೆ. ಎಂಬ ಆರೋಪಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ. ಪ್ರಕೃತಿಯ ಸೊಬಗನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಸ್ತೆ ಬದಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಭವಿಷ್ಯದ ದೃಷ್ಟಿಯಲ್ಲಿ ಶ್ಲಾಘನೀಯ. ಉತ್ತಮ ಹಸಿರು ಪರಿಸರ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಆದರೆ ರಸ್ತೆಯ ಎರಡೂ ಬದಿಯಲ್ಲಿ ಹೆಚ್ಚಿನ ಅಂತರ ಬಿಟ್ಟು ಗಿಡ ನೆಟ್ಟರೆ ಮುಂದೆ ಗಿಡ ಬೆಳೆದಾಗ ಪ್ರಕೃತಿ, ರಮಣೀಯ ಸೌಂದರ್ಯವೂ ಹೆಚ್ಚಾಗುವುದಲ್ಲದೆ ರಸ್ತೆ ಅಗಲೀಕರಣ ಸಂದರ್ಭದಲ್ಲಿಯೂ ಯಾವುದೇ ಸಮಸ್ಯೆಗಳು ಉದ್ಭವಿಸಲು ಸಾಧ್ಯವಿರುವುದಿಲ್ಲ.

ಈ ಮಾರ್ಗದ ರಸ್ತೆಯಲ್ಲಿ ಅಪಾಯಕಾರಿ ಮರಗಳು ಇನ್ನೂ ಇವೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಮೂಲಕ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಸ್ಪಂದನೆ ನೀಡಿದ್ದಾರೆ. ಇನ್ನೂ ಕೆಲ ಮರಗಳು ತೆರವು ಗೊಳಿಸಲು ಬಾಕಿ ಇದ್ದು, ತೆರವು ಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು.





















































 
 

error: Content is protected !!
Scroll to Top