ಕಾಂಗ್ರೆಸ್ ಹೈಕಮಾಂಡ್ ಅನ್ನು ಹೆದರಿಸಲು ಸಿಎಂ ಸಿದ್ದರಾಮಯ್ಯ ಸಮಾವೇಶ ಮಾಡುತ್ತಾರೆ: ಬಿ.ವೈ. ವಿಜಯೇಂದ್ರ

ಸಿಎಂ ಕುರ್ಚಿ ಅಲ್ಲಾಡುವಾಗ ಸಮಾವೇಶ ಮಾಡುವ ಕಲೆ ಸಿದ್ದರಾಮಯ್ಯ ಅವರಿಗೆ ಕರಗತ

ಮೈಸೂರು: ತಮ್ಮ ಕುರ್ಚಿ ಅಲ್ಲಾಡುತ್ತಿದೆ ಎಂದು ತಿಳಿದ ತಕ್ಷಣವೇ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಅನ್ನು ಬೆದರಿಸಲು ಸಮಾವೇಶಗಳ ಮೊರೆ ಹೋಗುತ್ತಾರೆ. ಅಂತಹ ಕಲೆ ಸಿದ್ದರಾಮಯ್ಯ ಅವರಿಗೆ ಕರಗತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ‌ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ‌ಸಿದ್ದುಗೆ ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಮಯ ಕೊಟ್ಟಿಲ್ಲ. ಆದ್ದರಿಂದ ಕೈ ಹೈಕಮಾಂಡ್ ಅನ್ನು ಬೆದರಿಸಲು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಇದು ಬ್ಲ್ಯಾಕ್ಮೇಲ್ ‌ಸಮಾವೇಶ. ಇವರು ರಾಜ್ಯದ ಅಭಿವೃದ್ಧಿಗೆ ಏನು ಮಾಡಿದ್ದಾರೆಂದು ಸಮಾವೇಶ ಮಾಡುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.





















































 
 

ಸಿದ್ದರಾಮಯ್ಯ ಅವರು ಸಿಎಂ ‌ಸ್ಥಾನಕ್ಕೆ ರಾಜೀನಾಮೆ ನೀಡುವ ಕಾಲ ಬಂದಿದೆ.ಕೆಲ ಸಮಯದ ಹಿಂದೆ ಅವರ ಮೇಲೆ ಮುಡಾ ಹಗರಣ ಆರೋಪ ಬಂದಾಗಲೂ ಸಮಾವೇಶ ಮಾಡಿದ್ದರು. ಈಗಲೂ ಸಮಾವೇಶ ಮಾಡಲು ಹೊರಟಿದ್ದಾರೆ. ತಮಗೆ ಸಂಕಟ ಬಂದಾಗ ಇವರಿಗೆ ಅಹಿಂದ ಸಮುದಾಯ ನೆನಪಾಗುತ್ತದೆ. ಅಹಿಂದರನ್ನು ಇವರು ಕೇವಲ ಮತಬ್ಯಾಂಕ್‌ಗಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

error: Content is protected !!
Scroll to Top