ಕಾನೂನು ಸುವ್ಯವಸ್ಥೆ ಕಾಪಾಡಲು ಸಿಎಂ ಯೋಗೀ ಸರ್ಕಾರದ ಮಾದರಿ ಕ್ರಮ

15,000 ಎನ್‌ಕೌಂಟರ್, 30,000ಕ್ಕೂ ಅಧಿಕ ಅಪರಾಧಿಗಳು ಅಂದರ್

ಲಕ್ನೋ: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಖಡಕ್ ಕ್ರಮಗಳನ್ನು ತೆಗೆದುಕೊಂಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಈ ವರೆಗೆ 15 ಸಾವಿರ ಎನ್‌ಕೌಂಟರ್ ನಡೆಸಿದ್ದು, ಇದರಲ್ಲಿ 238 ಮಂದಿ ಹತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.

2017 ರಿಂದೀಚೆಗೆ 30 ಸಾವಿರಕ್ಕೂ ಅಧಿಕ ಅಪರಾಧಿಗಳನ್ನು ಜೈಲಿಗಟ್ಟಲಾಗಿದೆ. 9 ಸಾವಿರಕ್ಕೂ ಅಧಿಕ ಆರೋಪಿಗಳಿಗೆ ಗುಂಡೇಟು ತಗುಲಿದೆ. ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದವರ ಮೇಲೆ ನಡೆಸಲಾದ ಎನ್‌ಕೌಂಟರ್‌ನಲ್ಲಿ ಸುಮಾರು 238 ಜನರು ಮೃತಪಟ್ಟಿದ್ದಾಗಿ ವರದಿಗಳು ಹೇಳಿವೆ‌.





















































 
 

ಸಿಎಂ ಯೋಗಿ ಅವರ ಸರ್ಕಾರ ಅಪರಾಧಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದು, ಅದರನ್ವಯ ಈ ರೀತಿಯ ಖಡಕ್ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ‌.

ಯೋಗೀಜಿ ಸರ್ಕಾರ ಅಪರಾಧಿಗಳಿಗೆ ‌ಸಂಬಂಧಿಸಿದ ನಿರ್ಮಾಣಗಳನ್ನು ಬುಲ್ಡೋಸರ್ ಮೂಲಕ ನೆಲಸಮ ಮಾಡಿ, ಅಪರಾಧಿಗಳಿಗೆ ಹೊಡೆತ ನೀಡಿದ್ದು ಸಹ ಕಾನೂನು ಬಾಹಿರ ವಿಷಯಗಳನ್ನು ತಡೆಯಲು ಸರ್ಕಾರ ತೆಗೆದುಕೊಂಡ ಅಗತ್ಯ ಕ್ರಮ ಎಂದೇ ಹೇಳಬಹುದು.

error: Content is protected !!
Scroll to Top