ಸ್ಥಗಿತವಾಗಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ

ಶ್ರೀನಗರ: ವಿಪರೀತ ಮಳೆ, ಭೂಕುಸಿತದ ಭೀತಿಯಿಂದ ‌ಸ್ಥಗಿತ ಮಾಡಲಾಗಿದ್ದು ಅಮರನಾಥ ಯಾತ್ರೆ ಒಂದು ದಿನದ ಬಳಿಕ ಮತ್ತೆ ಪ್ರಾರಂಭವಾಗಿದೆ.

ಜಮ್ಮುವಿನಿಂದ ಕಾಶ್ಮೀರದ ಕಡೆಗೆ ಶುಕ್ರವಾರ 7,908 ಯಾತ್ರಿಕರ ತಂಡ ತೆರಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಜುಲೈ 3 ರಂದು ಆರಂಭವಾಗಿದ್ದು ಅಮರನಾಥ ಯಾತ್ರೆ 2.52 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಂದಿನ ಯಾತ್ರಿಕರ ಮೊದಲ‌ ತಂಡದ 2,879 ಯಾತ್ರಿಕರು 92 ವಾಹನಗಳ ಮೂಲಕ ಬೆಳಗ್ಗೆ 3.30 ರ ವೇಳೆಗೆ ಪ್ರಯಾಣ ಆರಂಭಿಸಿದ್ದು ಬಾಲ್ಟಾಸ್ ಬೇಸ್ ಕ್ಯಾಂಪ್‌ನತ್ತ ತೆರಳಿದ್ದಾರೆ. 5029 ಯಾತ್ರಿಕರ ಎರಡನೇ ತಂಡ 169 ವಾಹನಗಳ ಮೂಲಕ 4.25 ಕ್ಕೆ ಪಹಲ್ಗಾಮ್ ಬೇಸ್ ಕ್ಯಾಂಪ್‌ಗೆ ತೆರಳಿದೆ.





















































 
 

error: Content is protected !!
Scroll to Top