ಪತ್ನಿಯನ್ನು ಹತ್ಯೆ ಮಾಡಿದ ಪಾಪಿ ಪತಿ | ಆರೋಪಿ ಬಂಧನ

ಉಪ್ಪಿನಂಗಡಿ : ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು ಎಂಬಲ್ಲಿ ಗುರುವಾರ ನಡೆದಿದೆ.

ಪತ್ನಿಯನ್ನು ಕೊಲೆ ಮಾಡಿದಾತ ಬಾಜಾರು ನಿವಾಸಿ ರಫೀಕ್(45) ಎಂದು ಗುರುತಿಸಲಾಗಿದ್ದು, ಕೊಲೆಯಾದ ಮಹಿಳೆ ಝೀನತ್ ಎಂದು ಗುರುತಿಸಲಸಲಾಗಿದೆ.

ಮನೆಯಲ್ಲೇ ಮಾತಿಗೆ ಮಾತು ಬೆಳದು ಗಂಡ ರಫೀಕ್ ತನ್ನ ಪತ್ನಿ ಝೀನತ್ ರವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಧಾವಿಸಿಪರಿಶೀಲನೆ ನಡೆಸಿದ್ದಾರೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.





















































 
 

error: Content is protected !!
Scroll to Top