ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣ: ಭೈರತಿ ಬಸವರಾಜ್ ವಿರುದ್ದ ಕೇಸ್ ದಾಖಲು

ಆರೋಪಕ್ಕೆ ಭೈರತಿ ಬಸವರಾಜ್ ಪ್ರತಿಕ್ರಿಯೆ ಏನು?

ಬೆಂಗಳೂರು: ಶಾಸಕ ಭೈರತಿ ಬಸವರಾಜ್ ಸೇರಿದಂತೆ ಐದು ಜನರ ವಿರುದ್ಧ ಭಾರತೀ ನಗರ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ನಡೆದ ರೌಡಿಶೀಟರ್ ‌ಶಿಪಪ್ರಕಾಶ್ ಯಾನೆ ಬಿಕ್ಲು ಶಿವು ಹತ್ಯೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಕೇಸು ದಾಖಲಾಗಿರುವುದಾಗಿದೆ. ಅನುಮಾನದ ಮೇಲೆ ಮೂವರು ಆರೋಪಿಗಳನ್ನು ಈ ಮೊದಲೇ ಬಂಧಿಸಿ ವಿಚಾರಣೆ‌ಯನ್ನೂ ‌ನಡೆಸಲಾಗುತ್ತಿದೆ.





















































 
 

ಶಿವಪ್ರಕಾಶ್ ಅವರ ತಾಯಿ ‌ವಿಜಯಲಕ್ಷ್ಮೀ ಅವರು ಭೈರತಿ ಬಸವರಾಜ್, ಜಗದೀಶ್, ಕಿರಣ್, ವಿಮಲ್, ಅನಿಲ್ ವಿರುದ್ಧ ಕೇಸು ದಾಖಲಿಸಿರುವುದಾಗಿದೆ. ಜಮೀನಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಭೈರತಿ ಬಸವರಾಜ್ ನೀಡಿದ ಕುಮ್ಮಕ್ಕಿನಿಂದ ‌ಆರೋಪಿಗಳು ಈ ಕೃತ್ಯ ಎಸಗಿದ್ದಾಗಿಯೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಭೈರತಿ ಬಸವರಾಜ್ ಪ್ರತಿಕ್ರಿಯೆ:
ನನ್ನ ಮೇಲೆ ದೂರು ನೀಡಲಾದ ಸುದ್ದಿ ಮಾಧ್ಯಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ನನಗೆ ಈ ಬಗ್ಗೆ ಏನೂ ತಿಳಿಯದು. ಜಮೀನು ಯಾರದ್ದು?, ಏನದರ ಕಥೆ? ಎನ್ನುವುದು ನನಗೆ ಗೊತ್ತಿಲ್ಲ. ಗೊತ್ತಿದ್ದರೆ ನಾನೇ ಪೊಲೀಸರನ್ನು ಸಂಪರ್ಕಿಸುತ್ತಿದ್ದೆ. ಇದು ರಾಜಕೀಯ ಪ್ರೇರಿತ ದೂರಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಗೃಹ ಸಚಿವರನ್ನೂ ಭೇಟಿ ಮಾಡುತ್ತೇನೆ ಎಂದು ಭೈರತಿ ಬಸವರಾಜ್ ತಿಳಿಸಿದ್ದಾರೆ.

error: Content is protected !!
Scroll to Top