ನಿಮಿಷಾ‌ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತ

ಬ್ಲಡ್ ಮನಿ, ಕ್ಷಮಾದಾನ ‌ನಿರಾಕರಿಸಿದ ತಲಾಲ್ ಮೆಹದಿ ಕುಟುಂಬ

ಸನಾ: ಯೆಮನ್ ನಾಗರಿಕ ತಲಾಲ್ ಮೆಹದಿ ಹತ್ಯೆಗೆ ಸಂಬಂಧಿಸಿದ ಹಾಗೆ ಆರೋಪಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತವಾಗಿದೆ.

ಮೃತ ತಲಾಲ್ ಕುಟುಂಬಸ್ಥರು ಬ್ಲಡ್ ಮನಿ ನಿರಾಕರಿಸಿದ್ದು, ಆರೋಪಿ ನಿಮಿಷಾಗೆ ಶರಿಯಾ ಕಾನೂನಿನ ಅನ್ವಯ ಕಿಸಾಸ್ ಬೇಡಿಕೆಯನ್ನು ಪುನರುಚ್ಛರಿಸಿದ್ದಾರೆ. ತಲಾಲ್ ಮೆಹದಿಯನ್ನು ಹತ್ಯೆ ಮಾಡಿದ ನಿಮಿಷಾಳಿಂದ ಕ್ಷಮೆ ಅಥವಾ ಪರಿಹಾರವನ್ನು ಸ್ವೀಕರಿಸುವ ಮಾತೇ ಇಲ್ಲ ಎಂದು ಮೃತನ ಕುಟುಂಬಸ್ಥರು ತೀರ್ಮಾನ ತಿಳಿಸಿದ್ದಾರೆ.





















































 
 

ಈ ಬಗ್ಗೆ ಮನೆತನ ಸಹೋದರ ಅಬ್ದುಲ್ ಪತ್ತಾಹ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಮೃತ ಮೆಹದಿ ನಿಮಿಷಾಳನ್ನು ‌ನಿಂದಿಸಿದ್ದು, ಪಾಸ್ಪೋರ್ಟ್ ತಡೆ ಹಿಡಿದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಶಿಕ್ಷೆಗೆ ತುತ್ತಾದ ಕೊಲೆಗಾರ್ತಿಯನ್ನು ಸಂತ್ರಸ್ತೆ ಎಂದು ಬಿಂಬಿಸಲಾಗುತ್ತಿದೆ ಎಂದಿದ್ದಾರೆ.

ವೃತ್ತಿಪರ ಅಥವಾ ವೈಯಕ್ತಿಕ ದ್ವೇಷವಿರಲಿ ಆದರೆ ಕ್ರೂರವಾಗಿ ಕೊಲ್ಲುವುದು, ಮೃತದೇಹವನ್ನು ವಿರೂಪ ಮಾಡುವುದು, ಮರೆಮಾಚುವುದು ಸಮರ್ಥನೀಯವಲ್ಲ. ಮೃತ ವ್ಯಕ್ತಿ ಮತ್ತು ಆರೋಪಿಯ ನಡುವೆ ಆರಂಭದಲ್ಲಿ ವೃತ್ತಿಪರ ಸಂಬಂಧ ಮಾತ್ರವೇ ಇತ್ತು. ಬಳಿಕ ಅದು ಮದುವೆಯ ವರೆಗೆ ಸಾಗಿತು. ಆ ಮದುವೆ ನಾಲ್ಕು ವರ್ಷಗಳ ಕಾಲ ಉಳಿಯಿತು. ಆ ಬಳಿಕ ವೈಷಮ್ಯ, ಕೊಲೆ ನಡೆದಿದೆ. ನಾವು ಈ ಹತ್ಯೆ ಮತ್ತು ಕಾನೂನು ಪ್ರಕ್ರಿಯೆಗಳಿಂದ ಬಹಳಷ್ಟು ನೊಂದಿದ್ದೇವೆ ಎಂದು ಮೃತನ ಸಹೋದರ ತಿಳಿಸಿದ್ದಾರೆ.

error: Content is protected !!
Scroll to Top