ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರಿಗಿನ್ನು ಆರೋಗ್ಯಪೂರ್ಣ ಆಹಾರ ವಿತರಣೆ

ನವದೆಹಲಿ: ಸಂಸತ್ ಭವನದಲ್ಲಿ ಆರೋಗ್ಯಕರ ಆಹಾರ ವಿತರಿಸುವ ನಿಟ್ಟಿನಲ್ಲಿ ರಾಗಿ ಇಡ್ಲಿ, ಗ್ರಿಲ್ ಫಿಶ್ ಜೊತೆಗೆ ತರಕಾರಿ, ಜೋಳದ ಉಪ್ಪಿಟ್ಟು ಮೊದಲಾದ ಆಹಾರಗಳನ್ನು ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಸಂಸದರು ಮತ್ತು ಅಧಿಕಾರಿಗಳಿಗೆ ಆಹಾರ ನೀಡಲಾಗುವ ಸಂಸತ್ತಿನ ಕ್ಯಾಂಟೀನಿನ ಊಟದ ಮೆನು ಪರಿಷ್ಕರಿಸಲಾಗಿದ್ದು, ರುಚಿಯಲ್ಲಿ ಮತ್ತು ಆರೋಗ್ಯದ ವಿಚಾರದಲ್ಲಿ ರಾಜಿಯಾಗದಂತೆ ಎಚ್ಚರ ವಹಿಸಲಾಗಿದೆ.

ಪರಿಷ್ಕೃತ ಮೆನು‌ವಿನಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಊಟ, ನಾರುಯುಕ್ತ ‌ಸಲಾಡ್, ಪ್ರೊಟೀನ್ ಉಳ್ಳ ಸೂಪ್ ನೀಡಲು ನಿರ್ಧರಿಸಲಾಗಿದೆ. ಪ್ರತಿ ಆಹಾರ ಒಳಗೊಂಡ ಕ್ಯಾಲರಿ ‌ಬಗೆಗೂ ಅದರಲ್ಲಿ ಮಾಹಿತಿ ನೀಡಲಾಗುತ್ತದೆ. ಲಘು ಆಹಾರವಾಗಿ ಚನ್ನಾ ಚಾಟ್, ಬಾರ್ಲಿ ಮತ್ತು ಜೋಳದ ಸಲಾಡ್, ಸುಟ್ಟ ಟೊಮೆಟೊ ಮತ್ತು ಬೇಸಿಲ್ ಶೋರ್ಬಾ, ತರಕಾರಿ ಸೂಪ್ ಸಹ ಒಳಗೊಂಡಿದೆ.





















































 
 

ಮಾಂಸಾಹಾರಿ ಆಹಾರದಲ್ಲಿ ಗ್ರಿಲ್ ಚಿಕನ್, ಮೀನು ಇರಲಿದೆ. ಸಕ್ಕರೆ ಬದಲು ಬೆಲ್ಲದಿಂದ ಮಾಡಲಾದ ಮಾವಿನ ಪಾನೀಯ, ಹುರಿಗಡಲೆ ಮಸಾಲೆ ಪಾನೀಯ, ಕಷಾಯ ನೀಡಲಾಗುತ್ತದೆ.

error: Content is protected !!
Scroll to Top