ಮೃತ ವ್ಯಕ್ತಿಯ ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ

ಕಾರ್ಕಳ: ಮೃತನ ಕಿಡ್ನಿ, ಹೃದಯ, ಕಣ್ಣುಗಳನ್ನು ದಾನ ಮಾಡುವ ಮೂಲಕ ನಂದಳಿಕೆಯ ಕುಟುಂಬವೊಂದು ಸಾವಿನ ನೋವಿನಲ್ಲೂ ಮತ್ತೊಂದಷ್ಟು ಜನರಿಗೆ ಸಾಂತ್ವನವಾಗುವ ಮೂಲಕ ಮಾದರಿಯಾಗಿದ್ದಾರೆ.

ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ಮಣ್ಣಿನ ನಂದಳಿಕೆಯ ನಿತೀಶ್ ಎನ್(46) ಮೃತಪಟ್ಚಿದ್ದರು. ಇವರ ಪತ್ನಿ ಮತ್ತು ತಾಯಿ ಮೃತರ ಕಣ್ಣು, ಕಿಡ್ನಿ, ಹೃದಯವನ್ನು ದಾನ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.

ನಿತೀಶ್ ಅವರು ಒಂದು ಕಣ್ಣಿನ ದೃಷ್ಟಿಯ ತೊಂದರೆ ಅನುಭವಿ ಸುತ್ತ ಬಿದ್ದು, ತಪಾಸಣೆಗಾಗಿ ಬೆಂಗಳೂರಿಗೆ ಬಂದಿದ್ದರು. ತಪಾಸಣೆಯ ಸಂದರ್ಭದಲ್ಲಿ ತೊಂದರೆಯಾಗಿ ಆ್ಯಂಜಿಯೋಪ್ಲಾಸ್ಟ್ ಮಾಡಲಾಗಿತ್ತು. ಬಳಿಕ ಮೆದುಳಿನ ಶಸ್ತ್ರಚಿಕಿತ್ಸೆ ಸಹ ಮಾಡಿದ್ದು, ರಕ್ತಸ್ರಾವ ನಿಲ್ಲದೆ ಮೃತಪಟ್ಟಿದ್ದಾರೆ.





















































 
 

ಮೃತರ ದೇಹದ ಅಂಗಾಂಗಗಳನ್ನು ಇತರರ ಬಾಳಿಗೆ ಬೆಳಕಾಗಲು ಅವರ ಕುಟುಂಬ ವರ್ಗ ದಾನ ಮಾಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

error: Content is protected !!
Scroll to Top