ನಗರದಲ್ಲಿ ಮಾದಕ ವಸ್ತು ಮಾರುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗಳು
ಮಂಗಳೂರು, ಜು.16: ನಗರದಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಎಂಟು ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಕೇರಳದ ರಾಹುಲ್, ಸಂಗೀತ್ ಕೃಷ್ಣ, ಸೂರಜ್, ಸಂಜಯ್, ಅಶ್ವಂತ್, ಅಬ್ದುಲ್ ಜಬ್ಬಾರ್, ರಿಚರ್ಡ್, ಅನುರಾಗ್ ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಬಂದರ್ ದಕ್ಕೆಯಲ್ಲಿ ಎಂಡಿಎಂಎ ಮಾರಾಟದಲ್ಲಿ ನಿರತರಾಗಿದ್ದಾಗ ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ನಗರದ ಕಾಲೇಜೊಂದರ ವಿದ್ಯಾರ್ಥಿಗಳಾಗಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
























