ವೈವಾಹಿಕ ಸಂಬಂಧ ಸಮಸ್ಯೆಗೆ ರಹಸ್ಯ ಕಾಲ್ ರೆಕಾರ್ಡ್ ಸಾಕ್ಷ್ಯವಾಗುತ್ತದೆ: ಸುಪ್ರೀಂ ಕೋರ್ಟ್

ನವದೆಹಲಿ: ಸಂಗಾತಿಯ ಸಂಭಾಷಣೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಅದನ್ನು ವೈವಾಹಿಕ ಸಮಸ್ಯೆಗಳ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳುವುದು ಸ್ವೀಕಾರಾರ್ಹ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಗಂಡ ಹೆಂಡತಿ ಒಬ್ಬರ ಮೇಲೊಬ್ಬರು ಬೇಹುಗಾರಿಕೆ ಮಾಡುತ್ತಿದ್ದಾರೆ, ರಹಸ್ಯವಾಗಿ ಸಂಭಾಷಣೆಗಳ ರೆಕಾರ್ಡ್ ಮಾಡುತ್ತಿದ್ದಾರೆ ಎಂದರೆ ಅವರಿಬ್ಬರ ದಾಂಪತ್ಯದಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ, ನ್ಯಾ. ಸಂತೋಷ್‌ಚಂದ್ರ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಆ ಮೂಲಕ ದಂಪತಿಗಳ ನಡುವಿನ ರಹಸ್ಯ ಸಂಭಾಷಣೆಯು ಸಾಕ್ಷ್ಯ ಕಾಯ್ದೆಯಡಿ ರಕ್ಷಿಸಲ್ಪಟ್ಟಿದ್ದು, ಅದನ್ನು ನ್ಯಾಯಾಂಗ ವಿಚಾರಣೆಯಲ್ಲಿ ಬಳಸಲಾಗದು ಎಂದು ಹರ್ಯಾಣ ಮತ್ತು ಪಂಜಾಬ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾ ಮಾಡಿರುವುದಾಗಿದೆ.





















































 
 

error: Content is protected !!
Scroll to Top