ಪುತ್ತೂರು: ಕಾವು ಮಾಡ್ನೂರು ಗ್ರಾಮದ ನವೋದಯ ಸದಸ್ಯೆಯರಾದ ಮಾಣಿಯಡ್ಕದ ನಂದಾದೀಪ ಗುಂಪಿನ ವನಜಾಕ್ಷಿ ಮತ್ತು ಕೆರೆಮಾರು ಬ್ರಹ್ಮಶ್ರೀ ಗುಂಪಿನ ದಿವ್ಯಶ್ರೀ ಅವರ ತುರ್ತು ಚಿಕಿತ್ಸೆಗೆ ಧನ ಸಹಾಯ ಹಸ್ತಾಂತರಿಸಲಾಯಿತು.

ಅವರ ಮನೆಗೆ ತೆರಳಿ ಕಾವು ನವೋದಯ ಒಕ್ಕೂಟದ ತುರ್ತು ನಿಧಿಯಿಂದ ವೈದ್ಯಕೀಯ ನೆರವಿಗಾಗಿ ಧನ ಸಹಾಯ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನವೋದಯ ಒಕ್ಕೂಟದ ಅಧ್ಯಕ್ಷ ಸುಬ್ರಾಯ ಗೌಡ, ಕಾವು ವಲಯ ಪ್ರೇರಕಿ ಮಾಧವಿ, ಗೌರವಾಧ್ಯಕ್ಷ ಅಮ್ಮು ಪೂಂಜ ಮತ್ತಿತರರು ಉಪಸ್ಥಿತರಿದ್ದರು.
























