ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

ಸಂಘದ ಅಧ್ಯಕ್ಷರಾಗಿ ಸೌಮ್ಯಶ್ರೀ ಹೆಗಡೆ, ಉಪಾಧ್ಯಕ್ಷರಾಗಿ ಎಸ್‍.ಚಿದಾನಂದ ರೈ, ಕಾರ್ಯದರ್ಶಿಯಾಗಿ ಅಮರ್‍ ನಾಥ್‍ ಆಯ್ಕೆ

ಪುತ್ತೂರು: ಎವಿಜಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ನಡೆಯಿತು. ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸೌಮ್ಯ ಶ್ರೀ ಹೆಗಡೆ  ಪುನರ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಎಸ್. ಚಿದಾನಂದ ರೈ, ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ಅಮರ್ ನಾಥ್ ಬಿ.ಪಿ.ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಶ್ಮಿ, ನಯನ, ನವೀನ್, ಅನುಪಮಾ, ದಿವ್ಯಶ್ರೀ ಹೆಗಡೆ, ಸವಿತಾ, ಶೇಖರ ಮತ್ತು ಶಿಕ್ಷಕರ ಪ್ರತಿನಿಧಿಯಾಗಿ ಶಿಕ್ಷಕಿ ಸವಿತಾ ಕೆ. ರವರು ಆಯ್ಕೆಯಾದರು.





















































 
 

ಆಯ್ಕೆಯ ಸಂದರ್ಭದಲ್ಲಿ ಶಾಲಾ ಮಂಡಳಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ, ಸಂಚಾಲಕ ಎ.ವಿ. ನಾರಾಯಣ, ಶಾಲಾ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಹಾಗೂ ಎಲ್ಲಾ ಶಿಕ್ಷಕ ವೃಂದ ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.

error: Content is protected !!
Scroll to Top