ಪುತ್ತೂರು: ಕರ್ನಾಟಕ ಸುನ್ನೀ ಯುವಜನ ಸಂಘದ (ಎಸ್ ವೈಎಸ್) ವತಿಯಿಂದ ಪುತ್ತೂರಿನಲ್ಲಿ ಸೌಹಾರ್ದ ಸಂಚಾರ ಜು.16 ಬುಧವಾರ ಬೆಳಿಗ್ಗೆ 8.30 ಕ್ಕೆ ಏಳ್ಮುಡಿಯಿಂದ ಕಿಲ್ಲೆ ಮೈದಾನದ ತನಕ ನಡೆಯಲಿದೆ ಎಂದು ಸಂಚಾರ ಸ್ವಾಗತ ಸಮಿತಿ ಚೇರ್ಮೆನ್ ಗೌಸಿಯ ಯೂಸುಫ್ ಸಾಜ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ವ ಧರ್ಮಿಯರು ಕೈ ಕೈ ಹಿಡಿದು ಕಾಲ್ನಡಿಗೆಯಲ್ಲಿ ಸಾಗುವ ಈ ವಿಶೇಷ ಜಾಥಾದಲ್ಲಿ ಡಾ.ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‍ಕಟ್ಟೆ, ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಮಾಯ್ ದೇ ದೇವುಸ್ ಚರ್ಚ್ ಧರ್ಮಗುರು ಡಾ.ಲಾರೆನ್ಸ್ ಮಸ್ಕರೇನಸ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಶಾಸಕ ಅಶೋಕ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದ.ಕ.ಜಿಲ್ಲಾ ಎಸ್ ವೈಎಸ್ ಅಧ್ಯಕ್ಷ ಅಶ್ರಫ್ ಸಖಾಫಿ ಮಾಡಾವು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಯೂಸುಫ್ ಹಾಜಿ ಕೈಕಾರ, ಇಕ್ಬಾಲ್ ಬಪ್ಪಳಿಗೆ, ಖಾಸಿಂ ಹಾಜಿ ಮಿತ್ತೂರು, ಸ್ವಾಲಿಹ್ ಮುರ ಉಪಸ್ಥಿತರಿದ್ದರು.
























