ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಅಲಂಗಾರು ಒಕ್ಕೂಟದ  ವಾರ್ಷಿಕೋತ್ಸವ

ವಿಟ್ಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ಆಲಂಗಾರು ಒಕ್ಕೂಟದ ವಾರ್ಷಿಕೋತ್ಸವ ಭಾನುವಾರ ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ದಕ್ಷಿಣ ಕನ್ನಡ -2 ಜಿಲ್ಲೆಯ ನಿರ್ದೇಶಕ ಬಾಬು ನಾಯ್ಕ್ ಸಮಾರಂಭ ಉದ್ಘಾಟಿಸಿ, ಸಂಘ ಬೆಳೆದು ಬಂದ ದಾರಿ, ಸಂಘದಲ್ಲಿ ಉತ್ತಮವಾಗಿ ಗ್ರೇಡ್ ಬರಬೇಕೆಂದರೆ ಏನು ಮಾಡಬೇಕು,ಯೋಜನೆಯಲ್ಲಿ 46000 ಕಾರ್ಯಕರ್ತರಿದ್ದು. ಬೇರೆ ಯಾವುದೇ ಸಂಸ್ಥೆಯಲ್ಲಿ ಇಷ್ಟು ಕಾರ್ಯಕರ್ತರಿಲ್ಲ. ಈ ನಿಟ್ಟಿನಲ್ಲಿ ಸ್ವಾವಲಂಬನೆಯಾಗಿ ಬದುಕಲು ದಾರಿ ಮಾಡಿಕೊಟ್ಟಿದ್ದಾರೆ ನಮ್ಮ ಪೂಜ್ಯರು ಎಂದರು.

ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಮಾಡತರ್, ಪಂಚಾಯತ್ ವ್ಯಾಪ್ತಿಯಲ್ಲಿ ಬರುವಂತಹ ಸೌಲಭ್ಯಗಳ ಬಗ್ಗೆ ತಿಳಿಸಿದರು.





















































 
 

10ನೆ ತರಗತಿಯಲ್ಲಿ ಅತಿ ಹೆಚ್ಚು 612 ಅಂಕ ಗಳಿಸದ ಕು. ಶ್ರುತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ದೀಕ್ಷಾ ಅವರನ್ನು ಗೌರವಿಸಲಾಯಿತು. ಅತ್ಯುತ್ತಮ ಪ್ರಗತಿ ಬಂದು & ಸ್ವಸಹಾಯ ಸಂಘಗಳನ್ನು ಗುರುತಿಸಲಾಯಿತು. \

ನಿವೃತ್ತ ಸೈನಿಕ ಪುರಂದರ ದರ್ಬೆ, ಅಳಿಕೆ  ವಲಯಾದ್ಯಕ್ಷ ರಾಜೇಂದ್ರ ರೈ, ವಲಯ ಮೇಲ್ವಿಚಾರಕರು, ಶೌರ್ಯ ವಿಪತ್ತು ಅಳಿಕೆ ಘಟಕದ ಸದಸ್ಯರು ಉಪಸ್ಥಿತರಿದ್ದರು. ಅಜ್ಜಿನಡ್ಕ ಸೇವಪ್ರತಿನಿಧಿ ಕಾವ್ಯ ಹಾಗೂ ಸರಸ್ವತಿಯವರು ಸಹಕರಿಸಿದರು. ಕಾರ್ಯದರ್ಶಿ ವಿಶಾಲಾಕ್ಷಿ ವರದಿ ಮಂಡಿಸಿದರು. ಸುಮತಿ ಸ್ವಾಗತಿಸಿ, ಸೇವಾಪ್ರತಿನಿಧಿ ರೂಪ ವಂದಿಸಿದರು. ಜಯಶ್ರಿಯವರು ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Scroll to Top