ಎರಡೂ ಕಾಲು ಕಳೆದುಕೊಂಡ ಬಳಿಕವೂ ಛಲ ಬಿಡದೆ ಹೋರಾಡಿ ಗೆದ್ದ ಧೀರ
ನವದೆಹಲಿ: ರಾಜ್ಯಸಭೆಗೆ ನಾಲ್ವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿನ್ನೆ ನಾಮನಿರ್ದೇಶನ ಮಾಡಿದ್ದಾರೆ. ಅವರಲ್ಲಿ ಹೆಚ್ಚು ಗಮನ ಸೆಳೆದದ್ದು ಕೇರಳದ ಸಿ. ಸದಾನಂದ ಮಾಸ್ಟರ್. ಇನ್ನುಳಿದವರು ಉಜ್ವಲ್ ನಿಕಮ್, ಹರ್ಷವರ್ಧನ್ ಶ್ರಿಂಗ್ಲಾ, ಮೀನಾಕ್ಷಿ ಜೈನ್ ಅವರನ್ನು ನಾಮ ನಿರ್ದೇಶನಗೊಂಡವರು. ಸಿ. ಸದಾನಂದ ಮಾಸ್ಟರ್ ನಾಮನಿರ್ದೇಶನ ನಿನ್ನೆಯಿಂದೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ.
ಸದಾನಂದ ಮಾಸ್ಟರ್ ಅವರು ಕೇರಳದ ಕಣ್ಣೂರಿನವರು. ಮೂರು ದಶಕಗಳ ಹಿಂದೆ ಸಿಪಿಎಂ ತೋರಿದ ಕ್ರೌರ್ಯಕ್ಕೆ ತಮ್ಮೆರಡೂ ಕಾಲುಗಳನ್ನು ಕಳೆದುಕೊಂಡವರು. ಆರ್ಎಸ್ಎಸ್ ಸ್ವಯಂಸೇವಕ, ಬಿಜೆಪಿಯ ನಾಯಕ. ಸದ್ಯ ಕೃತಕ ಕಾಲುಗಳ ಮೇಲೆ ನಡೆಯುವ ಇವರು ಸಿಪಿಎಂ ಕ್ರೌರ್ಯಕ್ಕೆ ಸವಾಲೊಡ್ಡಿದ ಧೀರ ಎಂದೇ ಜನಜನಿತರಾಗಿದ್ದಾರೆ.
ಕಮ್ಯುನಿಸ್ಟರ ದಾಳಿಯ ಸಂದರ್ಭದಲ್ಲಿ ಇವರ ಎರಡೂ ಕಾಲುಗಳನ್ನು ಕತ್ತರಿಸಿ, ಅವುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕವೂ ಸರಿಪಡಿಸಲಾಗದಂತೆ ಕಮ್ಯುನಿಸ್ಟರು ತುಂಡಾದ ಕಾಲುಗಳನ್ನು ನೆಲದ ಮೇಲೆ ಮರಳಿನ ಮೇಲೆ ಎಳೆದಾಡಿದ್ದರು. ಅದರ ಮೇಲೆ ಸೆಗಣಿ ಮೆತ್ತಿದ್ದರು. ಇವರನ್ನು ಇಂಚಿಂಚೂ ಹಿಂಸಿಸಿ ಕೊಲ್ಲಲು ಪ್ರಯತ್ನ ನಡೆಸಿದ ಕಮ್ಯುನಿಸ್ಟರ ಕ್ರೌರ್ಯ ಮನೋಭಾವಕ್ಕೆ ತಿರುಗೇಟು ಎಂಬಂತೆ ಕೃತಕ ಕಾಲುಗಳನ್ನು ಅಳವಡಿಸಿಕೊಂಡು ಕೆಲವು ವರ್ಷಗಳ ಹಿಂದೆ ಅದೇ ಕಮ್ಯುನಿಸ್ಟರ ವಿರುದ್ಧ ಜನರಕ್ಷಾ ಹೋರಾಟದಲ್ಲಿ ಪಾದಯಾತ್ರೆ ಮಾಡಿದ ನಾಯಕ ಅವರು. ಆ ಮೂಲಕ ಕಮ್ಯುನಿಸ್ಟರ ವಿರುದ್ಧ ಇತರ ಕಾರ್ಯಕರ್ತರಿಗೂ ಪಾದಯಾತ್ರೆಯ ಸಮಯದಲ್ಲಿ ಹುರುಪು ತುಂಬಿದ್ದರು.
ರಾಜ್ಯಸಭೆಗೆ ಸದಾನಂದ ಮಾಸ್ಟರ್ ಅವರಿಗಿಂತ ಸೂಕ್ತ ವ್ಯಕ್ತಿ ಮತ್ತೊಬ್ಬ ಸಿಗಲು ಸಾಧ್ಯವಿಲ್ಲ ಅಲ್ಲವೇ.
























