ದ.ಕ. ತೆಂಗು ರೈತ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆ

ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಸಂಸ್ಥೆಯ ಕಚೇರಿ ಸ್ಥಳಾಂತರಗೊಂಡು, ಧನ್ವಂತರಿ ಆಸ್ಪತ್ರೆಯ ಬಳಿಯ ಎಂ.ಆರ್. ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಶುಭಾರಂಭಗೊಂಡಿತು.

ಸಂಸ್ಥೆಯ ನೂತನ ಕಚೇರಿಯನ್ನು ಸಂಸ್ಥೆಯ ಗೌರವಾಧ್ಯಕ್ಷ, ಕೃಷಿಕ ಕಡಮಜಲು ಸುಭಾಷ್ ರೈ ಹಾಗೂ ಅಧ್ಯಕ್ಷ ಕುಸುಮಾಧರ್ ಎಸ್.ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಲಹಾ ಸಮಿತಿಯ ಸದಸ್ಯ ಕುಮಾರ್ ಪೆರ್ನಾಜೆ, ನಿರ್ದೇಶಕರಾದ ವರ್ಧಮಾನ್ ಶೆಟ್ಟಿ, ಲತಾ, ಮುಖ್ಯ ಸಲಹೆಗಾರ ಯತೀಶ್ ಕೆ.ಎಸ್., ಹಾಗೂ ಲಹರಿ ಡ್ರೈಫ್ರೂಟ್ಸ್ ಸಂಸ್ಥೆಯ ಮಾಲಕಿ ಲಿಖಿತ ಕುಸುಮ್ ಉಪಸ್ಥಿತರಿದ್ದರು. ಸಿಬ್ಬಂದಿ ನಿರ್ಮಲಾ ಪ್ರಾರ್ಥನೆ ಹಾಡಿದರು. ಸಿಇಒ ಗಣೇಶ್ ಕೆ ಸ್ವಾಗತಿಸಿದರು. ಮ್ಯಾನೇಜರ್ ನವ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಯುವ ತಂಡದ ಸದಸ್ಯರು ಆಗಮಿಸಿ ಸಂಸ್ಥೆಗೆ ಶುಭಾಶಯ ತಿಳಿಸಿದರು.





















































 
 
error: Content is protected !!
Scroll to Top