ಜು. 14: ನಿತಿನ್ ಗಡ್ಕರಿ ಅವರಿಂದ ಸಿಗಂದೂರು ಸೇತುವೆ ಲೋಕಾರ್ಪಣೆ

ಶಿವಮೊಗ್ಗ: ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ‌ಐತಿಹಾಸಿಕ ಸಿಗಂದೂರು ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಜುಲೈ 14 ರಂದು ಲೋಕಾರ್ಪಣೆ ಮಾಡಲಿದ್ದಾರೆ.

ಈ ಸೇತುವೆ ದೇಶದಲ್ಲೇ ಎರಡನೇ ಅತೀ ದೊಡ್ಡ ಕೇಬಲ್ ಸೇತುವೆ ಎಂಬ ಕೀರ್ತಿಗೂ ಭಾಜನವಾಗಲಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೂ ಇದು ಹೊಸ ದಿಶೆಯನ್ನು ‌ತೆರೆದು ಕೊಡುವ ಸಾಧ್ಯತೆ ಇದೆ.

ಈ ಸೇತುವೆ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಮತ್ತು‌ ಕೊಲ್ಲೂರಿನ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ಭಾಗಕ್ಕೆ ಸಂಪರ್ಕಿಸಲು ಈ ವರೆಗೆ ಜನರು ಲಾಂಚ್ ಬಳಸುತ್ತಿದ್ದು, ಇದೀಗ ನಿರ್ಮಾಣವಾಗಿ ‌ಲೋಕರ್ಪಣೆಯಾಗಲಿರುವ ಸೇತುವೆ ಜನರಿಗೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.





















































 
 
error: Content is protected !!
Scroll to Top