ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವು; ಇನ್ನೂ ಹಲವರಿರುವ ಶಂಕೆ

ನವದೆಹಲಿ: ನವದೆಹಲಿ ಸೀಲಾಮ್ ಪುರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು  ಬಿದ್ದಿದ್ದರಿಂದ ಇಬ್ಬರು ಮೃತಪಟ್ಟಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಜುಲೈ 12ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ದೆಹಲಿಯ ವೆಲ್ಕಮ್ ಪ್ರದೇಶದಲ್ಲಿರುವ ಜನತಾ ಮಜೂರ್ ಕಾಲೊನಿಯಲ್ಲಿ ಘಟನೆ ಸಂಭವಿಸಿದ್ದು ಇದುವರೆಗೆ 14 ತಿಂಗಳ ಮಗು ಸೇರಿ 8ಜನರನ್ನು ರಕ್ಷಿಸಲಾಗಿದೆ. 6ಕ್ಕೂ ಹೆಚ್ಚು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆಯಿದೆ.

7 ಅಗ್ನಿಶಾಮಕ ದಳದ ಸಿಬ್ಬಂದಿಗಳು, ಎಸ್‌ ಡಿ ಆರ್‌ ಎಫ್‌, ಎನ್‌ ಡಿ ಆರ್‌ ಎಫ್‌ ತಂಡ ಅವಶೇಷಗಳ ತೆರವು ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.





















































 
 

error: Content is protected !!
Scroll to Top