ವಜ್ರತೇಜಸ್ ಸೇವಾ ತಂಡದಿಂದ ಆನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ

ಪುತ್ತೂರು: ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಹೃದಯಿ ಸದಸ್ಯರಿಂದ ಸಂಗ್ರಹವಾದ ಮೊತ್ತವನ್ನು ಹಸ್ತಾಂತರಿಸಲಾಯಿತು.

ಆನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ಕಷ್ಟದಲ್ಲಿ ಇರುವ ಬಲ್ನಾಡು ನಿವಾಸಿ ನಾಗಪ್ಪ ಮಡಿವಾಳ ಎಂಬವರಿಗೆ ವಜ್ರತೇಜಸ್ ತಂಡದಿಂದ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಸಹಾಯಧನ ನೀಡಲಾಯಿತು.

ಈ ಸಂದರ್ಭದಲ್ಲಿ ವಜ್ರತೇಜಸ್ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ಕೋಶಾಧಿಕಾರಿ ಗಣೇಶ್ ಕಾಮತ್, ವಿಶ್ವ ಹಿಂದೂ ಪರಿಷದ್‌ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಪ್ರಮುಖರಾದ ರವಿ ಪುಣಚ, ಮನೋಜ್ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.





















































 
 
error: Content is protected !!
Scroll to Top