ಪುತ್ತೂರು: ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಯುವ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ರೋಟರಿ ಮನೀಷಾ ಸಭಾಂಗಣದಲ್ಲಿ ಬುಧವಾರ ಸಂಜೆ ಜರಗಿತು.

ಪದ ಪ್ರದಾನ ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲೆ 3181 ಇದರ ಪಿಡಿಜಿ ರಂಗನಾಥ್ ಭಟ್, ನೆರೆಯ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದಲ್ಲಿ ಕೆಲವು ಪ್ರಕರಣಗಳು ಇವೆಯಾದರೂ ಹನಿಗೂಡಿ ಹಳ್ಳ ಎಂಬಂತೆ ಸೇವಾ ಸಂಸ್ಥೆಯಾಗಿರುವ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಮಾರಕ’ ಪೋಲಿಯೊ ರೋಗವನ್ನು ಶೇ.99 ನಿರ್ಮೂಲನೆ ಮಾಡಿದ ಹೆಗ್ಗಳಿಕೆ ಹೊಂದಿದ್ದು, ಆಸಂಖ್ಯಾತ ರೋಟರಿ ಬಂಧುಗಳು ರೋಟರಿ ಫೌಂಡೇಶನ್ ಗೆ ನೀಡಿದ ದೇಣಿಗೆಯಿಂದ ಇದು ಸಾಧ್ಯವಾಗಿದೆ. ಆದ್ದರಿಂದ ರೋಟರಿ ಸಂಸ್ಥೆಯಲ್ಲಿ ಸದಸ್ಯತನ ಅಭಿವೃದ್ಧಿಗಾಗಿ ಎಲ್ಲರೂ ಪ್ರಯತ್ನಿಸಿದಾಗ ಪೋಲಿಯೊವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಬಹುದು ಎಂದು ಹೇಳಿದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಮಹಿಳೆಯರಿಗೂ ಸ್ಥಾನ ನೀಡಬೇಕೆಂದು ಹೋರಾಟ ನಡೆಸಿದ್ದರ ಪರಿಣಾಮವಾಗಿ 1989ರಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯದಲ್ಲಿತ್ತು. ಪುತ್ತೂರು ಯುವ ರೋಟರಿಯಲ್ಲಿ ಪ್ರಸ್ತುತ ಮಹಿಳಾ ರೊಟೇರಿಯನ್ಸ್ ಅಧಿಕ ಸಂಖ್ಯೆಯಲ್ಲಿದ್ದು ಅಂದು ಮಹಿಳೆಯರ ಪ್ರಾತಿನಿಧ್ಯಕ್ಕೆ ಹೋರಾಟ ಮಾಡಿದ್ದಕ್ಕೆ ಇಂದು ಫಲ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಮಹಿಳೆಯರ ರಾಜ್ಯಭಾರ ಆಗಬಹುದು ಎನ್ನುವ ಖುಷಿ ಆಗುತ್ತದೆ ಎಂದರು.

ರೋಟರಿ ವಲಯ ಸೇನಾನಿ ಭರತ್ ಪೈ ಮಾತನಾಡಿ, ರೋಟರಿ ಪ್ರತ್ತೂರು ಯುವ ಕ್ಲಬ್ ತನ್ನ ಪೂರ್ವಾಧ್ಯಕ್ಷರು ಶ್ರಮ ಹಾಗೂ ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಇಂದು ವೈಬ್ರೆಂಟ್ ಕ್ಲಬ್ ಆಗಿ 11ನೇ ವರ್ಷವನ್ನು ಕಾಣುತ್ತಿದೆ. ಕಳೆದ ವರ್ಷ ಅಶ್ವಿನಿಕೃಷ್ಣ ಮುಳಿಯರವರ ನೇತೃತ್ವದಲ್ಲಿ ಕ್ಲಬ್ ಏಳು ವಲಯಗಳಲ್ಲಿ ಉತ್ತಮ ಯೋಜನೆಗಳನ್ನು ಹಾಕಿಕೊಂಡು ಸೇವೆ ನೀಡಲಾಗಿದೆ. ಕ್ಲಬ್ ನೂತನ ಅಧ್ಯಕ್ಷ ಕುಸುಮ್ ರಾಜ್ ರವರು ಕೂಡ ಮತ್ತಷ್ಟು ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ಸಫಲರಾಗಲಿ ಎಂದರು.

ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ಜನತೆಯ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುವಂತಹ ಯೋಜನೆಗಳನ್ನು ಹಾಕಿ ಯುವಕ್ಲಬ್ ರೋಟರಿ ಜಿಲ್ಲೆಯಲ್ಲಿ ಡೈಮಂಡ್ ಪ್ಲಸ್ ಪ್ರಶಸ್ತಿಯನ್ನು ಗಳಿಸಿರುವುದು ಶ್ಲಾಘನೀಯ. ರೊಟೇರಿಯನ್ ಗಳು ಒಗ್ಗಟ್ಟಾಗಿ ಪಬ್ಲಿಕ್ ಇಮೇಜ್ ಗಳಿಸುವಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.
ರೋಟರಿ ಕ್ಲಬ್ ಪುತ್ತೂರು ಯುವದ ನಿರ್ಗಮಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಮಾತನಾಡಿ, ಸಮುದಾಯದಲ್ಲಿನ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಸಂದಿಸುವ ಮೂಲಕ ಕಳೆದವರ್ಷದ ರೋಟರಿ ಧೈಯವಾಗಿರುವ ಮ್ಯಾಜಿಕ್ ಆಫ್ ರೋಟರಿಗೆ ವಿಶೇಷ ಕಳೆ ತಂದಿರುವುದಕ್ಕೆ ರೋಟರಿ ಯುವದಲ್ಲಿನ ಸ್ನೇಹದ ಒಗ್ಗಟ್ಟು ಕಾರಣವಾಗಿದೆ ಎಂದರು.
ಸನ್ಮಾನ :
ಅಧ್ಯಯನದ ಜೊತೆಗೆ ತಂದೆಯವರಿಂದ ಪ್ರಾಯೋಗಿಕ ಪಾಠ, ಉಡುಪಿಯಲ್ಲಿ ಸಂಸ್ಕೃತ ಅಧ್ಯಯನ ಪೂರೈಸಿ ಪ್ರಸ್ತುತ ದ್ವಿತೀಯ ವರ್ಷದ ವಿದ್ವತ್ ಅಧ್ಯಯನ ಮಾಡುತ್ತಿದ್ದು, ವಿವಾಹ ‘ಹಾಗೂ ಕೆಲವು ವೈದಿಕ ಕಾರ್ಯಗಳಲ್ಲಿ ಭಾಗವಹಿಸಿದ ಕರ್ನಾಟಕ ರಾಜ್ಯದ ಅತ್ಯಂತ ಕಿರಿಯ ಮಹಿಳಾ ಪುರೋಹಿತೆಯಾಗಿರುವ ಬಂಟ್ವಾಳ ತಾಲೂಕಿನ ದಾಸಕೋಡಿ ಗ್ರಾಮದ ಅನಘಾ ಕಶೆಕೋಡಿ ಹಾಗೂ ನಿಟ್ಟಿ ಇನ್ಸಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜಿನಲ್ಲಿ ಬ್ಯಾಚಲರ್ಸ್ ಆಫ್ ಫಿಸಿಯೋಥೆರಪಿ ಪದವಿಯನ್ನು ಪೂರ್ಣಗೊಳಿಸಿ, ಪ್ರಸ್ತುತ ಅಲ್ಲಿಯೇ ಮಾಸ್ಟರ್ಸ್ ಆಫ್ ಫಿಸಿಯೋಥೆರಪಿ ಮತ್ತು ಲೋಸ್ಕೆಲೆಟಲ್ ಮತ್ತು ಸ್ಪೋರ್ಟ್ಸ್ ಇಂಜುರಿ(ಆರ್ಥೋಪೆಡಿಕ್ಸ್) ವಿಭಾಗದಲ್ಲಿ ಮಾಡುತ್ತಿದ್ದು ಕಳೆದ ಮೂರು ವರ್ಷಗಳಿಂದ ಮುರ ಎಂಬಲ್ಲಿನ ಶಿವಸದನದಲ್ಲಿ ಹಿರಿಯ ನಾಗರಿಕರ ಆಕ್ರಮದಲ್ಲಿನ ಹಿರಿಯರಿಗೆ ಉಚಿತವಾಗಿ ವ್ಯಾಯಾಮ ಮಾಡಿಸುವುದರ ಜೊತೆಗೆ ಹಾಡನ್ನು ಹಾಡಿಸಿ ಮನೋರಂಜನೆ ನೀಡುವ ಮೂಲಕ ಕಮ್ಯೂನಿಟಿ ಸರ್ವಿಸ್ ವಿಭಾಗದಲ್ಲಿ ‘ರೋಟರಿ ಯುವ ಸಮಾಜ ಸೇವಾ ರತ್ನ’ ಪುರಸ್ಕೃತರಾಗಿರುವ ಡಾ.ಗಾನ ಪಿಲಿಂಜರವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
3 ಸದಸ್ಯರ ಸೇರ್ಪಡೆ: ಎಲೆಕ್ಟೋನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ಪದವೀಧರರಾಗಿದ್ದು ಕಂಪ್ಯೂಟರ್ ಸೇಲ್ಸ್ ಮತ್ತು ಐಟಿ ಇನ್ಸಾ ಸ್ಪೆಕ್ಟರ್ ಆಗಿರುವ ಶಿವಪ್ರಕಾಶ್, ಆಯುರ್ವೇದಿಕ್ ಮತ್ತು ಲ್ಯಾಪರೋಸ್ಕೋಪಿಕ್ ಸರ್ಜನ್ ಆಗಿರುವ ಡಾ.ಪ್ರಭು ಎನ್., ಮಹಾಲಕ್ಷ್ಮೀ ಗ್ಲಾಸ್ ಎಂಡ್ ಪ್ಲೈವುಡ್ಸ್ ಮಾಲಕ ಭರತ್ ನಾಯಕ್ ಅವರನ್ನು ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ರೋಟರಿ ಪಿನ್ ತೊಡಿಸುವ ಮೂಲಕ ಕ್ಲಬ್ ಸರ್ವಿಸ್ ನಡಿಯಲ್ಲಿ ಅಧಿಕೃತವಾಗಿ ಕ್ಲಬ್ ಗೆ ಸೇರ್ಪಡೆಗೊಳಿಸಿದರು.
ವಿದ್ಯಾರ್ಥಿವೇತನ/ಬರ್ನಿಂಗ್ ಯಂತ್ರ ಹಸ್ತಾಂತರ
ಕೆನಡಾ ನಿವಾಸಿ ತೋನೆ ಅನಂತ್ ಪೈರವರ ಪ್ರಾಯೋ ಕತ್ವದಲ್ಲಿ ಐದು ವರ್ಷಗಳ ಸಂಪೂರ್ಣ ಶಿಕ್ಷಣ ಶುಲ್ಕ ಭರಿಸಿದ ಚೆಕ್ಕನ್ನು ಫಲಾನುಭವಿ ಕು.ಅನುಷ್ಠಾ ಪ್ರಭುರವರಿಗೆ ಹಾಗೂ ಕ್ಲಬ್ ಆರೋಗ್ಯ ಮತ್ತು ನೈರ್ಮಲ್ಯ ಯೋಜನೆಯಡಿಯಲ್ಲಿ ಕೊಕ್ಕಡ ಪಟ್ರಮೆ ಗ್ರಾಮದ ಶ್ರೀ ರಾಮ ಪ್ರೌಢಶಾಲೆಗೆ ಸ್ಯಾನಿಟರಿ ನ್ಯಾಪ್ಟಿನ್ ಬರ್ನರ್ ಮೆಷಿನನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿರವರಿಗೆ ರಂಗನಾಥ್ ಭಟ್ ರವರು ಹಸ್ತಾಂತರಿಸಿದರು.
ಪಿ.ಎಚ್.ಎಫ್ ಗೌರವ: ಇಂಟರ್ನ್ಯಾಷನಲ್ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್ಗೆ ಟಿ.ಆರ್.ಎಫ್ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿ ಪಡೆದ ಕ್ಲಬ್ ನ ಚೇತನ್ ಪ್ರಕಾಶ್ ಕಜೆ ಹಾಗೂ ಕ್ಲಬ್ ಸದಸ್ಯರಿಂದ ಶೇ.100 ಟಿ.ಆರ್.ಎಫ್ ದೇಣಿಗೆಯನ್ನು ಸಂಗ್ರಹಿಸಿದ ಕೋಶಾಧಿಕಾರಿ ಸಚಿನ್ ನಾಯಕ್ ಇಂದಾಜೆಯವರನ್ನು ಅಭಿನಂದಿಸಲಾಯಿತು.
‘ರೋಟರಿ ರೈಡ್ ರೈಟ್’ ಲಾಂಚ್
ರೋಟರಿ ರಸ್ತೆ ಸುರಕತೆ ಮತ್ತು ಜಾಗೃತಿ ಯೋಜನೆಯ ಜಿಲ್ಲಾ ಚೇರ್ಮನ್ ಡಾ.ಹರ್ಷಕುಮಾರ್ ರೈರವರ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಅಭಿಯಾನದ ಜನ ಜಾಗೃತಿ ಯೋಜನೆಯ ತಿಂಗಳಿಗೆ ಒಂದರಂತೆ ವರ್ಷದ ಕಾರ್ಯಕ್ರಮದ ರೋಟರಿ ರೈಡ್ ರೈಟ್ ಇದರ ಬ್ಯಾನರನ್ನು ಇತ್ತೀಚೆಗೆ ಪಿ.ಎಸ್.ಐ ಹುದ್ದೆಗೆ ಭಡ್ತಿ ಹೊಂದಿರುವ ಸಂಚಾರಿ ಠಾಣೆಯ ಪಿ.ಎಸ್.ಐ ಚಕ್ರಪಾಣಿರವರು ಲಾಂಚ್ ಮಾಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಕ್ಲಬ್ ನೂತನ ಅಧ್ಯಕ್ಷ ಕುಸುಮ್ ರಾಜ್, ಕಾರ್ಯದರ್ಶಿ ಅಭೀಷ್ ಕೆ. ಕೋಶಾಧಿಕಾರಿ ಸಚಿನ್ ನಾಯಕ್ ಎಸ್. ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿಕೃಷ್ಟ ಮುಳಿಯ, ಉಪಾಧ್ಯಕ್ಷೆ ಹಾಗೂ ಕಬ್ ಸರ್ವಿಸ್ ನಿರ್ದೇಶಕಿ ವಚನ ಜಯರಾಮ್, ಸಾರ್ಜಂಟ್ ಎಟ್ ಆರ್ಮ್ ಹರಿಪ್ರಸಾದ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಸುದರ್ಶನ್ ಕೈ ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಶರತ್ ಶ್ರೀನಿವಾಸ್, ಇಂಟರ್ನಾಷನಲ್ ಸರ್ವಿಸ್ ನಿರ್ದೇಶಕ ಸುದರ್ಶನ್ ಹಾರಕರೆ, ಯೂತ್ ಸರ್ವಿಸ್ ನಿರ್ದೇಶಕ ಪ್ರಜ್ಞಾಸಿದ್ಧಾರ್ಥ್ ಮುಳಿಯ, ಬುಲೆಟಿನ್ ಎಡಿಟರ್ ರಾಜೇಶ್ವರಿ ಆಚಾರ್, ಚೇರ್ಮನ್ಗಳಾಗಿ ಸೋನಾ ಪ್ರದೀಪ್ (ಮೆಂಬರ್ ಶಿಪ್), ಅನೂಪ್ (ಟಿ.ಆರ್, ಎಫ್), ಡಾ.ಯದುರಾಜ್ (ಪಬ್ಲಿಕ್ ಇಮೇಜ್), ಹರ್ಷಕುಮಾರ್ (ಜಿಲ್ಲಾ ಪ್ರಾಜೆಕ್ಟ್), ತ್ರಿವೇಣಿ ಗಣೇಶ್ (ಸಿಎಲ್ ಸಿಸಿ), ಅನಿಲ್ ಮುಂಡೋಡಿ (ಪಲ್ಸ್ ಪೋಲಿಯೋ), ಅಜಯ್ ರಾಮ್ ಕೋಡಿಬೈಲ್ (ಸಾಂಸ್ಕೃತಿಕ), ಚೇತನ್ ಪ್ರಕಾಶ್ ಕಜೆ (ಕ್ರೀಡೆ) ಅವರಿಗೆ ಪಿಡಿಜಿ ರಂಗನಾಥ್ ಭಟ್ ಪದಪ್ರದಾನ ನೆರವೇರಿಸಿದರು.
ವೇದಿಕೆಯಲ್ಲಿ ನೂತನ ಅಧ್ಯಕ್ಷೆ ಲಿಖಿತಾ ಕುಸುಮಾ ಉಪಸ್ಥಿತರಿದ್ದರು. ಕ್ಲಬ್ ಸದಸ್ಯೆ ಚೈತ್ರಿಕಾ ಕೋಡಿಬೈಲ್ ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಸ್ವಾಗತಿಸಿ, ನೂತನ ಕಾರ್ಯದರ್ಶಿ ಅಭೀಷ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ವಚನ ಜಯರಾಮ್ ಕ್ಲಬ್ ವರದಿ ಮಂಡಿಸಿದರು. ಸೋನಾ ಪ್ರದೀಪ್, ಶ್ರೇಯಾ ಸಾಯಿರಾಮ್, ಶೋಭಾ ಅನಿಲ್, ಅರ್ಪಿತಾ ಕನಿಷ್ಠ ಅತಿಥಿಗಳಿಗೆ ಸ್ಮರಣಿಕೆ ನೀಡಿ ಸ್ವಾಗತಿಸಿದರು. ಸುಧನ್ನ ಆಚಾರ್ಯ (ಪದ ಪ್ರದಾನ ಅಧಿಕಾರಿ), ನಿರೀಕ್ಷಿತ್ ರೈ (ಅಸಿಸ್ಟೆಂಟ್ ಗವರ್ನರ್), ಅನ್ನಪೂರ್ಣ ಕರ್ಮ(ವಲಯ ಸೇನಾನಿ), ಉಮೇಶ್ ನಾಯಕ್ (ರೋಟರಿ ಈಸ್ಟ್ ಅಧ್ಯಕ್ಷ) ಪರಿಚಯ ಮಾಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ವಚನ ಜಯರಾಮ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಸುದರ್ಶನ್ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಶರತ್ ಶ್ರೀನಿವಾಸ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಸುದರ್ಶನ್ ಹಾರಕರೆ, ಯೂತ್ ಸರ್ವಿಸ್ ನಿರ್ದೇಶಕ ಪ್ರಜ್ಞಾಸಿದ್ಧಾರ್ಥ್ ಮುಳಿಯ ಬುಲೆಟಿನ್ ಎಡಿಟರ್ ರಾಜೇಶ್ವರಿ ಆಚಾರ್, ಸಾರ್ಜಂಟ್ ಎಚ್ ಅರ್ಮ್ಸ್ ಹನಿಪ್ರಸಾದ್ ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷ ಉಮೇಶ್ ನಾಯಕ್ ಹಾಗೂ ಅನ್ನಪೂರ್ಣ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ನಿಕಟಪೂರ್ವ ಪದಾಧಿಕಾರಿಗಳಿಗೆ ಸನ್ಮಾನ: ಕಳೆದ ವರ್ಷ 12601 ಫಲಾನುಭವಿಗಳಿಗೆ ಸೇವೆಯ ಹಸ್ತ ಚಾಚಿದ ಹೆಗ್ಗಳಿಕೆಯ ಜೊತೆಗೆ ಸದಸ್ಯ ದೊಡಗೂಡಿ ಮೂರು ಸಲ ಪಿಕ್ನಿಕ್ ಹಮ್ಮಿಕೊಂಡಿರುವ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ವಚನ ಜಯರಾಮ್ ಹಾಗೂ ಕ್ಲಬ್ ಮಾಜಿ ಅಧ್ಯಕ್ಷರಾಗಿದ್ದು ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿ ಸೇವೆ ಸಲ್ಲಿಸಿರುವ ಡಾ.ಹರ್ಷಕುಮಾರ್ ಕೈ, ಪದಪ್ರದಾನ ಅಧಿಕಾರಿ ಪಿಡಿದ ರಂಗನಾಥ್ ಭಟ್ ರವರುಗಳನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
11ನೇ ವರ್ಷದ ಅಧ್ಯಕ್ಷನಾಗಿ ಕ್ಲಬ್ನ್ನು ಸಮರ್ಥವಾಗಿ ಮುನ್ನಡೆಸಲು ನಾನು ಬದ್ಧನಾಗಿದ್ದು, ಕ್ಲಬ್ ಪೂರ್ವಾಧ್ಯಕ್ಷರ ಹಾಗೂ ಸದಸ್ಯರ ಸಹಕಾರವನ್ನು ಬಯಸುತ್ತೇನೆ. ರೋಟರಿ ಹಾಗೂ ಜೀಸಿ ಸಂಸ್ಥೆಯು ನನ್ನ ಕನಸನು ನನಸುಗೊಳಿಸುವ ವೇದಿಕೆ ಆಗಿದೆ. ರೋಟರಿ ಜಿಲ್ಲೆಯ ಏಳು ವಲಯಗಳಲ್ಲಿ ಜನಪರ ಯೋಜನೆಗಳನ್ನು ಜಾರಿ ಮಾಡುವ ಯೋಚನೆ ನಮ್ಮ ಮುಂದಿದೆ. ದ.ಕ ತೆಂಗು ರೈತ ಉತ್ಪಾದಕರು ನಷ್ಟವನ್ನು ಅನುಭವಿಸಿದ ಸಂದರ್ಭ ದ.ಕ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಮೌಲ್ಯ ವರ್ಧಿತ ಸೇವೆಯ ಮೂಲಕ ಸ್ಪಂದಿಸಿರುತ್ತೇನೆ. ಹಿಂದಿನ ಅಧ್ಯಕ್ಷರು ಕ್ಲಬ್ ನ ಪಬ್ಲಿಕ್ ಇಮೇಜ್ ಅನ್ನು ಉಳಿಸಿಕೊಂಡಿದ್ದು ಅದನ್ನು ಮುಂದಿನ ದಿನಗಳಲ್ಲಿ ವಿಶೇಷ ಯೋಜನೆಗಳ ಮೂಲಕ ಮುಂದುವರೆಸಿಕೊಂಡು ಹೋಗಲು ಸದಸ್ಯರ ಪ್ರೀತಿ ಬೆರೆತ ಸಹಕಾರ ಬೇಕಾಗಿದೆ.
- ಕುಸುಮರಾಜ್, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಯುವ
























