ನಿವೃತ್ತಿ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದ್ದೇನು?

ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದು, 2027 ರಲ್ಲಿ ತಾವು ನಿವೃತ್ತಿ ಹೊಂದುತ್ತಿದ್ದು, ಅದು ದೇವರ ಇಚ್ಛೆಗೆ ಸಂಬಂಧಪಟ್ಟಿರುವುದು ಎಂದು ಹೇಳಿದ್ದಾರೆ.

ನವದೆಹಲಿಯ ಜೆಎನ್‌ಯು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ದೇವರ ಇಚ್ಛೆಗೆ ಅನುಗುಣವಾಗಿ 2027 ರಲ್ಲಿ ಸೂಕ್ತ ಸಮಯದಲ್ಲಿ ನಿವೃತ್ತಿ ಪಡೆಯುವುದಾಗಿ ತಿಳಿಸಿದ್ದಾರೆ.

ಜಗದೀಪ್ ಧನ್ಕರ್ ಅವರು ವೃತ್ತಿಯಲ್ಲಿ ಹಿರಿಯ ವಕೀಲರಾಗಿದ್ದು, ಉಪರಾಷ್ಟ್ರಪತಿ ಸ್ಥಾನಕ್ಕೇರುವ ಮೊದಲು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಭಾರತದ 14 ನೇ ಉಪರಾಷ್ಟ್ರಪತಿಯಾಗಿ 2022 ರಲ್ಲಿ ಎನ್‌ಡಿಎ ನಾಮನಿರ್ದೇಶನದಲ್ಲಿ ಆಯ್ಕೆಯಾಗಿದ್ದರು. ಇವರ ಉಪರಾಷ್ಟ್ರಪತಿ ಅವಧಿ ಆಗಸ್ಟ್ 10, 2027 ರಲ್ಲಿ ಮುಕ್ತಾಯವಾಗಲಿದೆ.





















































 
 

error: Content is protected !!
Scroll to Top