ಯುವತಿಯರ ವಿಡಿಯೋ ಶೂಟ್‌ ಮಾಡಿ ಇನ್‌ಸ್ಟಾಗ್ರಾಂಗೆ ಅಪ್‌ಲೋಡ್‌ : ಆರೋಪಿ ಸೆರೆ

ಬೆಂಗಳೂರಿನ ಜನನಿಬಿಢ ರಸ್ತೆಗಳಲ್ಲಿ ನಡೆದುಕೊಂಡು ಹೋಗುವವರ ವಿಡಿಯೋ ಮಾಡುತ್ತಿದ್ದ ಆರೋಪಿ

ಬೆಂಗಳೂರು: ಬೆಂಗಳೂರಿನ ಜನನಿಬಿಢ ರಸ್ತೆಯಲ್ಲಿ ನಡೆದುಹೋಗುವ ಮಹಿಳೆಯರ ವಿಡಿಯೋ ಶೂಟ್‌ ಮಾಡಿ ಅಸಭ್ಯ ಕಮೆಂಟ್‌ಗಳೊಂದಿಗೆ ಇನ್‌ಗ್ರಾಂಗೆ ಅಪ್‌ಲೋಡ್‌ ಮಾಡುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬನಶಂಕರಿ, ಕೋರಮಂಗಲ ಮತ್ತಿತರೆಡೆ ಸಾರ್ವಜನಿಕ ರಸ್ತೆಯ ಜನಜಂಗುಳಿಯ ವಿಡಿಯೋ ಮಾಡುತ್ತಿದ್ದೇನೆ ಎಂದು ಜನರನ್ನು ನಂಬಿಸಿ ರಹಸ್ಯವಾಗಿ ಯುವತಿಯರ ವಿಡಿಯೋ ಮತ್ತು ಫೋಟೊ ಶೂಟ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತನನ್ನು ಕೆ.ಆರ್ ಪುರಂ ನಿವಾಸಿ ಗುರುದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿ ಹೋಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಪಡೆದು ಕೆಲಸಕ್ಕಾಗಿ ಹುಡುಕಾಡುತ್ತಿದ್ದ ಎಂದು ತಿಳಿದು ಬಂದಿದೆ. ಯುವತಿಯರ ಫೋಟೋ, ವಿಡಿಯೋಗಳನ್ನ ರೆಕಾರ್ಡ್ ಮಾಡಿ ಅಸಭ್ಯ ಕಮೆಂಟ್‌ಗಳೊಂದಿಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡ್ತಿದ್ದ.





















































 
 

ಇತ್ತೀಚೆಗೆ ಯುವತಿಯೊಬ್ಬರ ವಿಡಿಯೋ ಇದೇ ರಿತಿ ಇನ್‌ಸ್ಟಾಗ್ರಾಂಗೆ ಅಪ್‌ಲೋಡ್‌ ಆಗಿದ್ದು, ಯುವತಿ ಬಗ್ಗೆ ಅನೇಕ ಮಂದಿ ಅಸಭ್ಯವಾಗಿ ಕಮೆಂಟ್‌ ಮಾಡಿದ್ದರು. ಯುವತಿ ವಿಡಿಯೋ ಕಿತ್ತು ಹಾಕಲು ಹೇಳಿದರೂ ಡಿಲೀಟ್‌ ಮಾಡಿರಲಿಲ್ಲ. ಬಳಿಕ ಯುವತಿ ಪೊಲೀಸರನ್ನು ಟ್ಯಾಗ್ ಮಾಡಿ ದೂರು ನೀಡಿದ್ದಳು. ಈ ದೂರಿನ ಆಧಾರದ ಮೇಲೆ ಬನಶಂಕರಿ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

error: Content is protected !!
Scroll to Top