ಕರ್ನಾಟಕದ ಜನರನ್ನು ಡ್ರಗ್ಸ್ಗೆ ದಾಸರಾಗಲು ಬಿಡುವುದಿಲ್ಲ
ಮಂಗಳೂರು: ಹಲವಾರು ಸಕಾರಾತ್ಮಕ ಸಲಹೆಗಳ ಮೂಲಕ ಶಾಂತಿ ಸಭೆ ಯಶಸ್ವಿಯಾಗಿದೆ. ಬಂದ ಸಲಹೆಗಳನ್ನು ಸಿ ಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಕಾನೂನನ್ನು ಕೈಗೆತ್ತಿಕೊಂಡರೆ ಸಮಸ್ಯೆ ನಿರ್ಮಾಣವಾಗುತ್ತದೆ. ಕಾನೂನಿನ ಪ್ರಕಾರ ಪರಿಹಾರ ಕಂಡುಕೊಂಡರೆ ಸಮಸ್ಯೆ ಇಲ್ಲ. ನೈತಿಕ ಪೊಲೀಸ್ಗಿರಿ ಮಾಡುವ ಬದಲು ಸಮಸ್ಯೆಗಳನ್ನು ಪೊಲೀಸರಿಗೆ ತಿಳಿಸಬೇಕು. ಆ ಬಳಿಕ ಅವರು ಅದಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಮಾದಕ ದ್ರವ್ಯಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡಿಯೇ ತೀರುತ್ತೇವೆ. ಶಿಕ್ಷಣ ವಲಯದಲ್ಲಿಯೂ ಆ್ಯಂಟಿ ಡ್ರಗ್ಸ್ ಕಮಿಟಿ ಮಾಡಲು ಸೂಚಿಸಲಾಗಿದೆ. ಈ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರಿಗೆ ನೀಡಲಾಗಿದೆ. ಕರ್ನಾಟವನ್ನು ಡ್ರಗ್ಸ್ಗೆ ದಾಸರಾಗಲು ಬಿಡುವುದಿಲ್ಲ ಎಂದು ನುಡಿದಿದ್ದಾರೆ.
























