ಹೆಣ್ಣು ಮಕ್ಕಳನ್ನು ಶಾಲೆಯಲ್ಲೇ ವಿವಸ್ತ್ರಗೊಳಿಸಿದ ಮುಖ್ಯಶಿಕ್ಷಕ

ಹೆಡ್‌ಮೇಷ್ಟ್ರು ಸೇರಿ ಆರು ಮಂದಿ ವಿರುದ್ಧ ಪೋಕ್ಸೊ ಕೇಸ್‌

ಪುಣೆ : ಶಾಲೆಯ ಮುಖ್ಯಶಿಕ್ಷಕನೇ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಸಂಭವಿಸಿದೆ. ಶೌಚಾಲಯದಲ್ಲಿ ರಕ್ತದ ಕಲೆ ಕಂಡ ಹಿನ್ನೆಲೆಯಲ್ಲಿ ಮುಟ್ಟಾದವರು ಯಾರು ಎಂದು ತಿಳಿಯಲು ಮುಖ್ಯಶಿಕ್ಷಕ ಎಲ್ಲ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ಹಾಗೂ ಓರ್ವ ಸಹಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆ ಶಾಲೆಯಲ್ಲಿ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮಂಗಳವಾರ ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು. ಶಿಕ್ಷಕರು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಯಾರು ಮುಟ್ಟಾಗಿದ್ದಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಿದ್ದು, ಇದು ಪೋಷಕರಲ್ಲಿ ಆಕ್ರೋಶವನ್ನುಂಟುಮಾಡಿದೆ.





















































 
 

ಪ್ರಾಂಶುಪಾಲರು ವಿದ್ಯಾರ್ಥಿನಿಯರನ್ನು ಶಾಲಾ ಸಭಾಂಗಣಕ್ಕೆ ಕರೆದು ಸ್ನಾನಗೃಹದ ನೆಲದ ಮೇಲೆ ಕಂಡುಬಂದ ರಕ್ತದ ಕಲೆ ಕಂಡುಬಂದಿರುವ ಕುರಿತು ಪ್ರಶ್ನೆಗಳನ್ನು ಕೇಳಿದ್ದರು. ನಂತರ ಮುಟ್ಟಾದವರು ಹಾಗೂ ಮುಟ್ಟಾಗದವರು ಹೀಗೆ ಎರಡು ಗುಂಪುಗಳಾಗಿ ವಿಂಗಡಿಸಲು ಹೇಳಿದ್ದರು.
10ರಿಂದ 12 ವರ್ಷದೊಳಗಿನ ಕೆಲವು ಹುಡುಗಿಯರನ್ನು ಪರೀಕ್ಷಿಸಲು ಒಬ್ಬ ಮಹಿಳಾ ಸಿಬ್ಬಂದಿಗೆ ಹೇಳಲಾಗಿತ್ತು. ತಪಾಸಣೆ ಸಮಯದಲ್ಲಿ ಪ್ಯೂನ್ ಆಕೆಯ ಒಳ ಉಡುಪು ಮುಟ್ಟಿದಾಗ ಆಕೆ ಪ್ಯಾಡ್ ಹಾಕಿದ್ದಳು. ಆದರೆ ಮುಟ್ಟಾಗಿಲ್ಲ ಎಂದು ಹೇಳಿಕೊಂಡಿದ್ದಳು. ಆಕೆಯನ್ನು ಇತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮುಂದೆ ಅವಮಾನಿಸಿದ್ದಾರೆ.

ಮುಖ್ಯಶಿಕ್ಷಕ, ಪಿಯೋನ್, ಇಬ್ಬರು ಶಿಕ್ಷಕರು ಮತ್ತು ಇಬ್ಬರು ಟ್ರಸ್ಟಿಗಳು ಸೇರಿದಂತೆ ಆರು ಜನರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮುಖ್ಯಶಿಕ್ಷಕ ಮತ್ತು ಪ್ಯೂನ್ ಬಂಧಿಸಲಾಗಿದ್ದು, ಉಳಿದ ನಾಲ್ವರ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top