ಐದು‌ ವರ್ಷ ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯ

ಬೆಂಗಳೂರು: ಐದು ವರ್ಷ ನನ್ನದೇ ಸರ್ಕಾರ ಎಂದು ಹೇಳುವ ಮೂಲಕ ಸಿಎಂ ಬದಲಾವಣೆ ವಿಷಯಕ್ಕೆ ಸಂಬಂಧಿಸಿದ ಹಾಗೆ ಮಾತನಾಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳ ಕಾಲ ಆಡಳಿತ ತಮ್ಮದೇ ಆಗಿರುತ್ತದೆ. ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ‌ಪಟ್ಟವನ್ನು ತನಗೆ ಬಿಡಲು ಹೈಕಮಾಂಡ್ ‌ಸೂಚಿಸಿದೆ ಎನ್ನುವ ಮೂಲಕ ರಾಜ್ಯದಲ್ಲಿ ಸಿ ಎಂ ಬದಲಾವಣೆ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಮಧ್ಯಂತರ ನಿರ್ಗಮನದ ಸುದ್ದಿ ತಳ್ಳಿ ಹಾಕಿದ ಅವರು ಜುಲೈ 2 ರಂದು ಡಿ.ಕೆ. ಶಿವಕುಮಾರ್ ಅವರ ಮುಂದೆಯೇ ನಾನು 5 ವರ್ಷಗಳ ಕಾಲ ಸಿಎಂ ಆಗಿ ಇರುವುದಾಗಿ ತಿಳಿಸಿದ್ದೇನೆ ಎಂದಿದ್ದಾರೆ. ಡಿಕೆಶಿ ರಾಜಕೀಯದ ಬಗೆಗೂ ಮಾತನಾಡಿದ ಅವರು, ಅವರು ಕೂಡಾ ಸಿಎಂ ಸ್ಥಾನಕ್ಕೆ ಆಕಾಂಕ್ಷಿ ಎನ್ನುವುದರಲ್ಲಿ ತಪ್ಪೇನಿಲ್ಲ. ಆದರೆ ಈಗ ಕುರ್ಚಿ ಖಾಲಿ ಇಲ್ಲ ಎಂದು ಡಿಕೆಶಿ ಅವರೇ ಈ ಹಿಂದೆಯೇ ಹೇಳಿದ್ದಾಗಿ ತಿಳಿಸಿದ್ದಾರೆ.





















































 
 

ಸಿ ಎಂ ಅವಧಿ ಎರಡೂವರೆ ವರ್ಷದ್ದು ಎಂದು ಹೈ ಕಮಾಂಡ್ ನಿರ್ಧರಿಸಿಲ್ಲ. ಹೈ ಕಮಾಂಡ್ ಯಾವ ನಿರ್ಣಯ ಕೈಗೊಂಡರೂ ಅದಕ್ಕೆ ನಾವು ಬದ್ಧರಿರಬೇಕು ಎಂದು ಹೈಕಮಾಂಡ್ ಹೇಳಿರುವುದು. ಅದರಂತೆ ಹೈಕಮಾಂಡ್ ಏನು ಹೇಳಿದರೂ ನಾನು, ಡಿಕೆಶಿಯಾದಿಯಾಗಿ ಎಲ್ಲರೂ ಮಾಡುತ್ತೇವೆ ಎಂದಿದ್ದಾರೆ.

error: Content is protected !!
Scroll to Top