ಗುರು ಪೂರ್ಣಿಮೆಯಂದು ಕೆಮ್ಮಾಯಿ ಕೃಷ್ಣನಗರ ಬಿಜೆಪಿ ಬೂತ್ ವತಿಯಿಂದ ಸನ್ಮಾನ

ಪುತ್ತೂರು: ಗುರು ಪೂರ್ಣಿಮೆ ದಿನದಂದು  ಕೆಮ್ಮಾಯಿ ಕೃಷ್ಣನಗರ 140 ನೇ ಬೂತಿನಲ್ಲಿ ಕೃಷ್ಣನಗರದ ನಿವೃತ್ತ ಉಪನ್ಯಾಸಕರಾದ ಗುಡ್ಡಪ್ಪ ಗೌಡ ಬಲ್ಯ ಇವರ ಧರ್ಮಪತ್ನಿಯಾದ ನಿವೃತ್ತ ಉಪನ್ಯಾಸಕಿ ಡಾ. ಮೋತಿ ಬಾಯಿ ಅವರಿಗೆ  ಆಂದ್ರ ಪ್ರದೇಶದ ಕುಪ್ಪಂ ಯುನಿವರ್ಟಿಸಿಯಿಂದ ಡಾಕ್ಟರೇಟ್ ಪದವಿ ಲಭಿಸಿದ್ದು, ಗುರು ಪೂರ್ಣಿಮೆಯ ದಿನದಂದು  ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮ ನಡೆಯಿತು.

 ಅವರ ಶೈಕ್ಷಣಿಕ ಸಾಧನೆ ,ಹಾಗೂ ಅವರ ಸಮಾಜ ಸೇವೆಯನ್ನು ಗೌರವಿಸುವ ಸಲುವಾಗಿ ಸನ್ಮಾನ ನಡೆಯಿತು. ನಗರ ಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಕೃಷ್ಣನಗರ ಬೂತ್ ಅಧ್ಯಕ್ಷ ದಯಾನಂದ ಗೌಡ, ಕಾರ್ಯದರ್ಶಿ  ರವಿ ಆಚಾರ್ಯ,  ಮಾಜಿ ಪುರಸಭಾ ಸದಸ್ಯ ಉದಯ ಕುಮಾರ್ ಆಚಾರ್ಯ, ಮಹಿಳಾ ಮೋರ್ಚಾದ ಕುಸುಮ ಚಂದಪ್ಪ ಗೌಡ, ಬೂತಿನ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಮತ್ತು  ದೀನೇಶ್ ಆಚಾರ್ಯ ಇವರು ಭಾಗವಹಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗುಡ್ಡಪ್ಪ ಗೌಡ ಬಲ್ಯ ಇವರು ಗುರು ಪೂರ್ಣಿಮೆಯ ದಿನದ ಮಹತ್ವದ ಬಗ್ಗೆ  ವಿವರಿಸಿದರು. ಸನ್ಮಾನ ಸ್ವೀಕರಿಸಿದ ಶ್ರೀಮತಿ ಮೋತಿ ಬಾಯಿ   ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು.





















































 
 
error: Content is protected !!
Scroll to Top