ಬಲ್ನಾಡು ಶ್ರೀ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಪರಿಹಾರ ಕಾರ್ಯ | ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನ

ಪುತ್ತೂರು : ತಾಲೂಕಿನ ಬಲ್ನಾಡು ಶ್ರೀ ಭಟ್ಟಿವಿನಾಯಕ ದೇವಸ್ಥಾನದಲ್ಲಿ ಜೀರ್ಣೋದ್ದಾರ ಪ್ರಯುಕ್ತ ಚಿಂತಿಸಿದ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜು.5 ರಿಂದ ಜು.10 ಗುರುವಾರತನಕ ನಡೆಯಿತು.

ಪರಿಹಾರ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರ ತoತ್ರಿಗಳಾದ  ಬ್ರಹ್ಮಶ್ರೀ ಕೆಮ್ಮಿoಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜು. 5 ಶನಿವಾರ ಬೆಳಿಗ್ಗೆ 9 ರಿಂದ ಸರ್ಪಸಂಸ್ಕಾರ ನಡೆಯಿತು. ಜು.8 ಮಂಗಳವಾರ ಬೆಳಿಗ್ಗೆ 8 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, 12 ತೆಂಗಿನಕಾಯಿ ಮಹಾಗಣಪತಿ ಹೋಮ, ಸರ್ಪ ಸಂಸ್ಕಾರ ಮಂಗಳ, ಆಶ್ಲೇಷಾ ಬಲಿ, ವಟು ಆರಾಧನೆ, ನಾಗದೇವರಿಗೆ ತಂಬಿಲ, ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಸಂಹಿತಾ ಕಲಶದ ಪ್ರಯುಕ್ತ ಋಕ್‌ ಸಂಹಿತಾ ಪಾರಾಯಣ ಪ್ರಾರಂಭ, ಪಂಚವಿಂಶತಿ ಕಲಶ ಪೂಜೆ, ಮಧ್ಯಾಹ್ನ 12.00 ಕ್ಕೆ ಸಂಹಿತಾ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5.30 ರಿಂದ ದುರ್ಗಾಪೂಜೆ, ಸುದರ್ಶನ ಹೋಮ, ಅಘೋರ ಹೋಮ, ತ್ರಿಷ್ಟುಪ್ ಹೋಮ, ಸುಮಂಗಲೀ ಆರಾಧನೆ, ದಂಪತಿ ಆರಾಧನೆ, ಆವಾಹನೆ, ಬಾಧಾಕರ್ಷಣೆ, ಉಚ್ಚಾಟನೆ ಜರಗಿತು.

ಜು.9 ಬುಧವಾರ ಬೆಳಿಗ್ಗೆ 8 ರಿಂದ ಮಹಾಗಣಪತಿ ಹೋಮ, ತಿಲಹೋಮ, ಭಗವದ್ಗೀತೆ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ದ್ವಾದಶಮೂರ್ತಿ ಆರಾಧನೆ, ಮಧ್ಯಾಹ್ನ 12.30 ರಿಂದ: ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 5.30 ರಿಂದ ಪ್ರಾಸಾದ ಶುಧ್ಯಾದಿ, ಶುದ್ದಿ ಪ್ರಕ್ರಿಯೆಗಳು, ರಾತ್ರಿ 8.30ರಿಂದ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.





















































 
 

ಜು.10 ಗುರುವಾರ  ಬೆಳಿಗ್ಗೆ 8 ರಿಂದ ಬಿಂಬ ಶುದ್ದಿ ಕಲಶ ಪೂಜೆ, ವಿಶೇಷ ಪ್ರಾಯಶ್ಚಿತ, ಪಂಚಗವ್ಯಾವಗಾಹ, ಸಾಯುಜ್ಯ ಪೂಜೆ, ದಾನಗಳು, ಮಧ್ಯಾಹ್ನ 12 ಕ್ಕೆ ನವಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ಗಳು ಜರಗಿತು.

error: Content is protected !!
Scroll to Top