ನಿಮ್ಮಲ್ಲಿ ಕ್ಷಿಪಣಿಗಳಿದ್ದರೆ, ನಮ್ಮಲ್ಲಿ ಆತ್ಮಾಹುತಿ ಬಾಂಬರ್‌ಗಳಿದ್ದಾರೆ: ಉಗ್ರ ಮಸೂದ್ ಅಜರ್ ಹೇಳಿಕೆ

ಪಾಕ್ ಮಸೀದಿಗಳಲ್ಲಿ ಪ್ರಸಾರವಾಯ್ತು ಜೈಶ್ -ಎ- ಮೊಹಮ್ಮದ್ ಉಗ್ರ ಸಂಘಟನೆಯ ನಾಯಕನ ಬೆದರಿಕೆ

ನವದೆಹಲಿ: ನಿಮ್ಮಲ್ಲಿ ಕ್ಷಿಪಣಿಗಳಿವೆ, ಆದರೆ ನಮ್ಮ ಜೈಶ್ ಸಂಘಟನೆಯ ಬಳಿ ಆತ್ಮಾಹುತಿ ಬಾಂಬರ್‌ಗಳು ಇದ್ದಾರೆ ಎಂದು ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿ ಮಸೂದ್ ಅಜರ್ ಬೆದರಿಕೆ ಹಾಕಿರುವ ‌ಭಾಷಣವನ್ನು ಪಾಕಿಸ್ತಾನದ ಮಸೀದಿಗಳಲ್ಲಿ ಪ್ರಸರಿಸಲಾಗಿದ್ದು, ಆತ ಈ ಹೇಳಿಕೆಯನ್ನು ಭಾರತವನ್ನುದ್ದೇಶಿಸಿಯೇ ಆತ ಹೇಳಿದ್ದಾನೆ ಎನ್ನಲಾಗಿದೆ.

ಖಾಸಗಿ ಆಂಗ್ಲ ಮಾಧ್ಯಮವೊಂದು ಈ ಸುದ್ದಿಯನ್ನು ಬಿತ್ತರಿಸಿದೆ. ಪ್ರಪಂಚದ ಬೇರೆ ಬೇರೆ ದೇಶಗಳ ಬಳಿ ಎಲ್ಲವೂ ಇರಬಹುದು. ಆದರೆ ನಮ್ಮಲ್ಲಿ ಪ್ರಾಣವನ್ನೇ ಕೊಡುವುದಕ್ಕೆ ‌ಸಿದ್ಧರಿರುವ ಹತ್ತು ಸಾವಿರ ಮಂದಿ ಆತ್ಮಾಹುತಿ ಬಾಂಬರ್‌ಗಳಿದ್ದಾರೆ. ಮುಜಾಹಿದ್‌ಗಳಿಗೆ ನೀಡಲಾದ ಹಣವನ್ನು ಜಿಹಾದ್‌ಗೆ ಬಳಸುವುದಾಗಿ ಉಗ್ರ ಮಸೂದ್ ಅಜರ್ ಹೇಳಿರುವ ಧ್ವನಿಮುದ್ರಿಕೆಗಳನ್ನು ಪಾಕ್ ಮಸೀದಿಗಳಲ್ಲಿ ಪ್ರಸಾರ ಮಾಡಲಾಗಿದೆ.





















































 
 

ಪಾಕಿಸ್ತಾನಕ್ಕೆ ಧಾರ್ಮಿಕ ನಾಯಕರು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಮುಜಾಹಿದ್‌ಗಳು ಕೂಡಾ. ನಮ್ಮಲ್ಲಿ 30 ಸಾವಿರ ಜನರ ತಂಡ ಇದ್ದು, ಹತ್ತು ಸಾವಿರ ಫಿದಾಯಿನ್‌ಗಳಿದ್ದಾರೆ. ಈ ಫಿದಾಯಿನ್‌ಗಳನ್ನು ತಡೆಯಲು ಯಾವ ಕ್ಷಿಪಣಿಗಳಿಗೂ ಸಾಧ್ಯ ಇಲ್ಲ ಎಂದು ಅದರ್ ಹೇಳಿದ್ದಾನೆ.

ಉಗ್ರ ಅಜರ್‌ನ ಈ ಹೇಳಿಕೆ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಯಾವುದೇ ರೀತಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಿದ್ಧವಾಗಿದೆ ಎನ್ನುವುದರ ಮುನ್ಸೂಚನೆಯಾಗಿದ್ದು, ಪಾಕಿಸ್ತಾನ ಉಗ್ರಗಾಮಿಗಳಿಗೆ, ಉಗ್ರ ಕೃತ್ಯಗಳಿಗೆ ಬೆಂಬಲ ನೀಡುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

error: Content is protected !!
Scroll to Top