ಶವಗಳ ಮೇಲೂ ಅತ್ಯಾಚಾರ : ಹಮಾಸ್‌ ಉಗ್ರರ ಭಯಾನಕ ಕ್ರೌರ್ಯ ಬಿಚ್ಚಿಟ್ಟ ವರದಿ

ಇಸ್ರೇಲ್‌ ಮಹಿಳೆಯರ ಮೇಲೆ ಲೈಂಗಿಕ ಹಿಂಸೆ ಎಸಗಿದ್ದ ಹಮಾಸ್‌ ಉಗ್ರರು

ಟೆಲ್‌ಅವೀವ್‌ : ಹಮಾಸ್ ಉಗ್ರರು ತಮ್ಮ ಒತ್ತೆಸೆರೆಯಲ್ಲಿದ್ದ ಇಸ್ರೇಲ್‌ ಮಹಿಳೆಯರ ಮೇಲೆ ಎಸಗಿದ ಭೀಕರ ಕ್ರೌರ್ಯ ಈಗ ಬಯಲಾಗಿದೆ. ಹಮಾಸ್ ಉಗ್ರರು ಇಸ್ರೇಲಿ ಮಹಳೆಯರ ಮೃತದೇಹಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿಗುತ್ತಿದ್ದರು, ಖಾಸಗಿ ಭಾಗಗಳಿಗೆ ಗುಂಡು ಹಾರಿಸಿ ವಿಕೃತ ಖುಷಿ ಅನುಭವಿಸುತ್ತಿದ್ದರು ಎಂಬ ಭಯಾನಕ ವಿಚಾರವನ್ನು ಬದುಕಿ ಬಂದ ಕೆಲವರು ಹೇಳಿಕೊಂಡಿದ್ದಾರೆ.

2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅಪ್ರಚೋದಿತ ದಾಳಿ ನಡೆಸಿದ ಬಳಿಕ ಇಸ್ರೇಲ್ ಮತ್ತು ಹಮಾಸ್ ನಡುವಿನ ಭೀಕರ ಯುದ್ಧ ಶುರುವಾಗಿ ಈಗಲೂ ಮುಂದುವರಿದಿದೆ. ಈ ಹೋರಾಟ ಇರಾನ್ ತಲುಪಿ ಅನೇಕ ಆಯಾಮಗಳನ್ನೂ ಪಡೆದುಕೊಂಡಿದೆ. 2023 ಅಕ್ಟೋಬರ್ 7ರ ದಾಳಿಯ ಬಗ್ಗೆ ಇಸ್ರೇಲಿ ಪ್ರತ್ಯಕ್ಷದರ್ಶಿಗಳು ಈಗ ಹಮಾಸ್‌ನ ಕ್ರೌರ್ಯದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.





















































 
 

ಇಸ್ರೇಲಿ ಮಹಿಳೆಯರ ಶವಗಳನ್ನು ವಿವಸ್ತ್ರಗೊಳಿಸಿ ಮರಗಳು ಮತ್ತು ಕಂಬಗಳಿಗೆ ಕಟ್ಟಲಾಗುತ್ತಿತ್ತು. ಇದರ ನಂತರ, ಹಮಾಸ್ ಕ್ರೂರಿಗಳು ಅವರ ಖಾಸಗಿ ಭಾಗಗಳು ಮತ್ತು ತಲೆಗೆ ಗುಂಡು ಹಾರಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಲಂಡನ್ ದಿ ಟೈಮ್ಸ್ ಪತ್ರಿಕೆ ತನ್ನ ತನಿಖಾ ವರದಿಯಲ್ಲಿ ಹಮಾಸ್‌ ಉಗ್ರರ ಬರ್ಬರ, ಅನಾಗರಿಕ ಕ್ರೌರ್ಯವನ್ನು ಬಹಿರಂಗಗೊಂಡಿದೆ. ಹಮಾಸ್ ಕನಿಷ್ಠ 6 ವಿಭಿನ್ನ ಸ್ಥಳಗಳಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳುಗಳು, ಅತ್ಯಾಚಾರದಿಂದ ಬದುಕುಳಿದ ಮಹಿಳೆ ಮತ್ತು 17 ಪ್ರತ್ಯಕ್ಷದರ್ಶಿಗಳು ಈ ಮಾಹಿತಿ ನೀಡಿದ್ದಾರೆ.

ಹಮಾಸ್ ಲೈಂಗಿಕ ಹಿಂಸೆಯನ್ನು ಯುದ್ಧತಂತ್ರ ಅಸ್ತ್ರವಾಗಿ ಬಳಸುತ್ತಿದೆ ಎಂದು ಈ ವರದಿ ಹೇಳಿದೆ. ಈ ಹಿಂದೆ ಐಸಿಸ್ ಮತ್ತು ಬೊಕೊ ಹರಾಮ್ ಭಯೋತ್ಪಾದಕರು ಇದೇ ರೀತಿಯ ವಿಧಾನಗಳನ್ನು ಬಳಸುತ್ತಿದ್ದರು. ಅನೇಕ ಮಹಿಳೆಯರ ಶವಗಳಲ್ಲಿ ಬಟ್ಟೆಗಳೇ ಇರಲಿಲ್ಲ, ಅವರ ಕೈಗಳನ್ನು ಕಟ್ಟಲಾಗಿತ್ತು. ಕೊಲೆಯ ನಂತರ ಸಾಮೂಹಿಕ ಅತ್ಯಾಚಾರ ನಡೆದಿರುವ ಪುರಾವೆಗಳಿವೆ. ಅವರ ಖಾಸಗಿ ಭಾಗಗಳನ್ನು ವಿರೂಪಗೊಳಿಸಲಾಗಿತ್ತು ಎಂದು ವರದಿ ಬಹಿರಂಗಪಡಿಸಿದೆ.

error: Content is protected !!
Scroll to Top