ಅಕ್ರಮವಾಗಿ ಮತಾಂತರ ಮಾಡುತ್ತಿದ್ದ ಆರೋಪದಲ್ಲಿ ಎಟಿಎಸ್ ಅಧಿಕಾರಿಗಳಿಂದ ಬಂಧಿತನಾಗಿದ್ದ ಛಂಗುರ್
ಲಕ್ನೋ: ಅಕ್ರಮವಾಗಿ ಮತಾಂತರ ಮಾಡುತ್ತಿದ್ದ ಆರೋಪದಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳಿಂದ ಬಂಧಿತನಾಗಿರುವ ಜಲಾಲುದ್ದೀನ್ ಯಾನೆ ಛಂಗುರ್ ಬಾಬಾನಿಗೆ ಸಂಬಂಧಿಸಿದಅಕ್ರಮ ಕಟ್ಟಡಗಳನ್ನು ಸಿಎಂ ಯೋಗಿ ಸರ್ಕಾರ ಬುಲ್ಡೋಜರ್ ಮೂಲಕ ನೆಲಸಮ ಮಾಡಿದೆ.
ಬಲರಾಮ್‌ಪುರದಲ್ಲಿ ಆರೋಪಿ ಛಂಗುರ್ ಹೊಂದಿದ್ದ ಅಕ್ರಮ ಕಟ್ಟಡಗಳ ಮೇಲೆ ಸಿಎಂ ಯೋಗೀಜಿ ಅವರ ಬುಲ್ಡೋಸರ್ ಸವಾರಿ ಮಾಡಿರುವುದಾಗಿದೆ. ಆರೋಪಿಯ ತನಿಖೆಯ ವೇಳೆ ಮಹಾ ಸತ್ಯಗಳು ಸ್ಪೋಟವಾಗಿದ್ದು ಈತ ಕೇವಲ ಸಮಾಜಘಾತುಕ ಮಾತ್ರವಲ್ಲ ದೇಶದ್ರೋಹಿಯೂ ಆಗಿರುವುದು ಬೆಳಕಿಗೆ ಬಂದಿದೆ. ಈತನ ಜೊತೆಗೆ ಅಕ್ರಮ ಮತಾಂತರ ಮಾಡಲು ಸಾಥ್ ನೀಡಿರುವ ಇತರ ಆರೋಪಿಗಳ ವಿರುದ್ಧವೂ ಕಠಿಣ ಕ್ರಮದ ಎಚ್ಚರಿಕೆಯನ್ನು ಯೋಗೀಜಿ ನೀಡಿದ್ದಾರೆ.
ಕಳೆದ ಶನಿವಾರ ಬಲರಾಮ್‌ಪುರದಲ್ಲಿ ಛಂಗುರ್ ಮತ್ತು ಆತನ ಸಹಾಯಕಿ ನಸ್ರೀನ್ ಯಾನೆ ನೀತುವನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು.
























