ಭಾರತೀಯ ಚಾರ್ಟರ್ಡ್ ಎಕೌಂಟೆಂಟ್ಸ್ ಸಂಸ್ಥೆ (ಐಸಿಎಐ) 2025 ರಲ್ಲಿ ನಡೆಸಿದ ಸಿ.ಎ. ಪರೀಕ್ಷೆಯಲ್ಲಿ ಮುಹಮ್ಮದ್ ಇಯಾಸ್‍ ಉತ್ತೀರ್ಣ

ಪುತ್ತೂರು: ಭಾರತೀಯ ಚಾರ್ಟರ್ಡ್‍ ಎಕೌಂಟೆಂಟ್ಸ್ ಸಂಸ್ಥೆ (ಐಸಿಎಐ)ಯು 2025 ರಲ್ಲಿ ನಡೆಸಿದ ಸಿ.ಎ. ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಮುಹಮ್ಮದ್ ಇಯಾಸ್ ರವರು ಮೊದಲ ಪ್ರಯತ್ನದಲ್ಲಿಯೇ ಗ್ರೂಪ್ ಒಂದು ಮತ್ತು ಗ್ರೂಪ್  ಎರಡರಲ್ಲೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಪೆರ್ನೆ ನಿವಾಸಿ ಇಸ್ಮಾಯಿಲ್ ಮತ್ತು ರುಖ್ಯಾ ದಂಪತಿಯ ಕಿರಿಯ ಪುತ್ರನಾಗಿರುವ ಮುಹಮ್ಮದ್ ಇಯಾಸ್ ರವರು ಸಿಎ ಗಣೇಶ್ ರಾವ್ ಪಿ. ಅವರ ಮಾರ್ಗದರ್ಶನದಲ್ಲಿ ಕಳೆದ ಮೇ ತಿಂಗಳು ನಡೆದ ಸಿಎ ಅಂತಿಮ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ.

ಮುಹಮ್ಮದ್ ಇಯಾಸ್ ಅವರು ಪೆರ್ನೆಯ ಶ್ರೀ ರಾಮಚಂದ್ರ ಪ್ರೌಢಶಾಲೆ, ಉಪ್ಪಿನಂಗಡಿಯ ಇಂದ್ರಪ್ರಸ್ಥಪಿಯು ಕಾಲೇಜು ಮತ್ತು ತ್ರಿಶಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.





















































 
 
error: Content is protected !!
Scroll to Top