ಬಂಟ್ವಾಳ: ಪಿಯುಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಂಟ್ವಾಳ: ಪಿಯುಸಿ ವಿದ್ಯಾರ್ಥಿಯೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ತುಂಬೆ ಗ್ರಾಮದ ಪರ್ಲಕ್ಕೆಯ ಕರುಣಾಕರ ಗಟ್ಟಿ ಅವರ ಏಕೈಕ ಪುತ್ರ ತೇಜಸ್ ಆತ್ಮಹತ್ಯೆ ಮಾಡಿಕೊಂಡ ಬಾಲಕ.

ತೇಜಸ್ ಮೊಡಂಕಾಪುವಿನ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದ. ನಿನ್ನೆ ಆತನಿಗೆ ಪರೀಕ್ಷೆ ಇದ್ದು, ಸಂಜೆ ವೇಳೆ ಕ್ಲಾಸಿನಿಂದ ಮನೆಗೆ ಬಂದಿದ್ದಾನೆ. ತಂದೆ ತಾಯಿ ಇಬ್ಬರು ನೌಕಯಲ್ಲಿದ್ದು, ಅವರು ಮನೆಗೆ ಬರುವಾಗ ರಾತ್ರಿಯಾಗುತ್ತದೆ. ತೇಜಸ್‌ ಎಂದಿನಂತೆ ಸಂಜೆ ಮನೆಗೆ ಬಂದು ನೇಣು ಹಾಕಿಕೊಂಡಿದ್ದ.

ತಂದೆ ರಾತ್ರಿ ಮನೆಗೆ ಬಂದಾಗ ಬಾಗಿಲು ಹಾಕಿದ್ದು ಕಂಡು ಮನೆಯೊಳಗೆ ನೋಡಿದಾಗ ಕೋಣೆಯಲ್ಲಿ ಈತ ನೇಣು ಬಿಗಿದು ನೇತಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಆತ ಮೃತಪಟ್ಟಿರುವುದಾಗಿ ವೈದ್ಯರು‌ ಪರೀಕ್ಷಿಸಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ತುಂಬೆ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





















































 
 
error: Content is protected !!
Scroll to Top