ನನ್ನ ಜೀವ ಇರುವುದೇ ಬಿಜೆಪಿಯಲ್ಲಿ : ಈಶ್ವರಪ್ಪ | ಹಲವು ಪಕ್ಷದವರು ನನಗೆ ಈಗಾಗಲೇ ಆಫರ್ ನೀಡಿದ್ದಾರೆ | ಬಿಜೆಪಿ ಬಿಟ್ಟು ಬೇರೆ ಪಕ್ಷಗಳನ್ನು ಸೇರುವ ಮಾತೇ ಇಲ್ಲ

ಬಳ್ಳಾರಿ: ಮಾಧ್ಯಮ ಗಳ ಮೂಲಕ ನನ್ನನ್ನು ಬಿಜೆಪಿಗೆ ‌ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುವುದನ್ನು ನೋಡಿದ್ದೇನೆ. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಅವರು ಮಾತನಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ನಡೆದ ವಿದ್ಯಮಾನದ ಬಗ್ಗೆ ಮಾಜಿ ಡಿ.ಸಿ.ಎಂ. ಕೆ. ಎಸ್. ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ಜೀವ ಇರುವುದೇ ಬಿಜೆಪಿಯಲ್ಲಿ. ಭಾರತೀಯ ಜನತಾ ಪಕ್ಷವನ್ನು ಬಿಟ್ಟು ನಾನೆಲ್ಲಿ ಹೋಗಲಿ ಎಂದು ಹೇಳಿದ್ದಾರೆ.

ನನಗೆ ಬೇರೆ ಪಕ್ಷಗಳಿಂದಲೂ ಆಫರ್ ಬಂದಿತ್ತು. ಸಮಾಜವಾದಿ ಪಕ್ಷದ ಅಖಿಲೀಶ್ ಆರದವ್ ಸಹ ಆಹ್ವಾನ ನೀಡಿದ್ದರು. ಸಿದ್ದರಾಮಯ್ಯ ಸಂಪುಟದ ಸಚಿವರುಗಳು ಸಹ ನನ್ನನ್ನು ಸಂಪರ್ಕ ಮಾಡಿದ್ದರು. ಬಿಜೆಪಿಯನ್ನು ನಾನು, ಯಡಿಯೂರಪ್ಪ, ಅನಂತ ಕುಮಾರ್ ಸೇರಿ ಕಟ್ಟಿದ್ದೇವೆ. ಅದಕ್ಕೂ ಮೊದಲು ಪಕ್ಷ‌ಸಂಘಟನೆಗಾಗಿ ಹಲವರು ರಕ್ತ ಸುರಿಸಿದ್ದಾರೆ. ನಾನು ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷವನ್ನು ಸೇರುವುದಿಲ್ಲ ಎಂದು ಅವರು ಮನದಿಂಗಿತ ವ್ಯಕ್ತಪಡಿಸಿದ್ದಾರೆ.





















































 
 
error: Content is protected !!
Scroll to Top